'ಜೀವಿಸು ಸುಮ್ಮನೆ'
ಮಾತಿಗೆ
ಬರ ಬಂದಿತೆ
ನಮ್ಮ ಕನಸ
ಹೊರೆ ಅಲಿಸಿತೆ
ಸುಂದರ ಸ್ನೇಹಕ್ಕೆ
ಕಡಲು ಕೊರೆಯಿತೆ
ನಮ್ಮ ನಡುವೆ
ಭುವಿ ಬಿರಿಯಿತೆ
ಹೇಳು ಗೆಳತಿ
ನಿನಗಾಗಿ ನಾನು
ಯುಗಗಳು ಕಾಯುವುದಿಲ್ಲ !!
ನೀನಿಲ್ಲದೆ ನಾನಿಲ್ಲ
ಎಂದೆನ್ನುವುದಿಲ್ಲ !!
ಹೌದು ಕಹಿ ಸತ್ಯವೇ ನಾನು
ನಾ ಹೇಳುತ್ತಿರುವೆ ಕೇಳು
ನಮ್ಮ ಮಧುರಗಳಲ್ಲೇ
ನನ್ನ ನಾ ಮರೆಯುವೆ
ನಿನ್ನ ಆಸೆ ನನಗಿಲ್ಲ
ಇನ್ನೇನೆ ಬಯಸಿದರು
ಅದು ಹಲಸು, ಹೊಲಸು !!
ಜೀವಿಸು ಸುಮ್ಮನೆ
ಎಲ್ಲವ ಮರೆತು
ಆ ಕಪ್ಪು ಕನಸುಗಳಲ್ಲಿವೆ
ನಮ್ಮ ಮಿಂಚು ಮನಗಳು .....
- ಶೂಜ್ಞ
ಮಾತಿಗೆ
ಬರ ಬಂದಿತೆ
ನಮ್ಮ ಕನಸ
ಹೊರೆ ಅಲಿಸಿತೆ
ಸುಂದರ ಸ್ನೇಹಕ್ಕೆ
ಕಡಲು ಕೊರೆಯಿತೆ
ನಮ್ಮ ನಡುವೆ
ಭುವಿ ಬಿರಿಯಿತೆ
ಹೇಳು ಗೆಳತಿ
ನಿನಗಾಗಿ ನಾನು
ಯುಗಗಳು ಕಾಯುವುದಿಲ್ಲ !!
ನೀನಿಲ್ಲದೆ ನಾನಿಲ್ಲ
ಎಂದೆನ್ನುವುದಿಲ್ಲ !!
ಹೌದು ಕಹಿ ಸತ್ಯವೇ ನಾನು
ನಾ ಹೇಳುತ್ತಿರುವೆ ಕೇಳು
ನಮ್ಮ ಮಧುರಗಳಲ್ಲೇ
ನನ್ನ ನಾ ಮರೆಯುವೆ
ನಿನ್ನ ಆಸೆ ನನಗಿಲ್ಲ
ಇನ್ನೇನೆ ಬಯಸಿದರು
ಅದು ಹಲಸು, ಹೊಲಸು !!
ಜೀವಿಸು ಸುಮ್ಮನೆ
ಎಲ್ಲವ ಮರೆತು
ಆ ಕಪ್ಪು ಕನಸುಗಳಲ್ಲಿವೆ
ನಮ್ಮ ಮಿಂಚು ಮನಗಳು .....
- ಶೂಜ್ಞ
No comments:
Post a Comment