Sunday, 31 March 2013

# ಕಪ್ಪಿಟ್ಟ ಕಣ್ಣಲ್ಲಿ #


       # ಕಪ್ಪಿಟ್ಟ ಕಣ್ಣಲ್ಲಿ #

ಸಂದ್ಯ ಕಾಲದಿ
ಸುಕ್ಕು ಗೆರೆಗಳಲಿ ಕದಡಿದೆ
ಪಾಪ ಪುಣ್ಯಗಳ ವರದಿ
ಮನಸ ಮಾತ ಕೇಳಲು
ಇನ್ನು ಸಾಲದೆ ಅನುಭವಿಸಿ!
ಮುಚಿಟ್ಟ ಕಿರಣಗಳ ಸರಿಸಿ
ದಾರಿದೀಪವಾಗು
ಕಾಯಿ, ಪಿಂದೆಗಳ ಬೆಳೆಸಿ....

ಪಾಪಿ ಚಿರಾಯು ಎನ್ನಲು
ನೀನೇನು ಪಾಪಿಯೇ
ನಿನ್ನದಲ್ಲದ ಸ್ವಾರ್ಥವ
ಬೆಳೆಸಿತು ಈ ಜಗವು
ಎದುರಿಜಲು ಒಗ್ಗದೆ
ಹರಿದಂತೆ ಬೆಳೆದೆ
ಹುರಿಯಂತೆ ನಡೆದೆ
ಕುಡಿಗಳ ದಾರಿಯಲಿ
ಸಾಲದೆ !!?????
ನೀ ಮುರಿದ ಬಂಧಗಳು!
ಇನ್ನಾದರೂ ಸರಿಸು
ನಿನ ಮನದ ಕಪ್ಪು ಪರದೆಯ ......

ಮರಳಿ ಮರಳಿ
ಬಂದಿದೆ ಕಾಲ
ಕಪ್ಪಿಟ್ಟ ಕಣ್ಣಲ್ಲಿ
ಸುಂದರ ನೋಟ
ನೋಡಲು ಸಾದ್ಯವೇ !?
ಮುಪ್ಪಾದ ಕಾಲದಲಿ
ಯೊವ್ವನ ಬರಲು ಸಾದ್ಯವೇ !?
ಆದರೆ ಮಾಡಿದ ಪಾಪವ
ತೊಳೆಯಲು ಜೀವದ
ಕೊನೆಯ ಕ್ಷಣವೂ ಸಾದ್ಯ !
ಇನ್ನಾದರು ತೀರಿಸು
ನಿನ ಮನಸಿನ ಋಣ
ಮನಸ ಮಾತ
ಕೇಳು ನೀ ಜಾಣ ..... 

                                               -
ಶೂಜ್ಞ

No comments:

Post a Comment