Sunday, 31 March 2013

'ಸಂಗಾತಿ'


            'ಸಂಗಾತಿ'

ಭುವಿಗೆ, ಭಾನು ಸಂಗಾತಿ 
ಸೂರ್ಯಂಗೆ, ಚಂದಿರ ಸಂಗಾತಿ
ಮಳೆಗೆ, ಮೋಡ ಸಂಗಾತಿ
ಮಿಂಚಿಗೆ, ಬೆಳಕು ಸಂಗಾತಿ
ಹಗಲಿಗೆ, ಇರಳು ಸಂಗಾತಿ
ನೀನಾದೆ, ಈ ಜೀವದ ಸಂಗಾತಿ ..!!

ನಿನ್ನ ಪ್ರೀತಿಯ ಸಿಹಿ ಜೇನಲಿ,
ನಾ ಮುಳಗಿದೆ .
ನಿನ್ನ ಅಕ್ಕರೆಯ ಸವಿಮಾತಲಿ,
ನಾ ತೇಲಿಹೋದೆ.
ನಿನ್ನ ಆಲಿಂಗನದಲಿ,
ನಾ ಸಂಪೂರ್ಣನಾದೆ.
ನಿನ್ನ ಒಡಿಳಲಿ,
ನಾ ಮತ್ತೆ ಮಗುವಾದೆ...!!

ನೀ ತಾಯಾಗಿ 
ನನ್ನ ಕಣ್ತೆರಿಸಿದೆ
ಅರಿಯಲು ನನ್ತಾಯಿ ಪ್ರೀತಿಯ !
ಎಲೆಗೂಸಿಗಾಗಿ ನಿನ್ನತ್ಯಾಗ 
ಅರಿತೆ ನಾನಾಗ 
ತೀರಿಸಲಾಗುವುದೇ ನನ್ತಾಯಿ ತ್ಯಾಗ ?!
ಎಲ್ಲಿತ್ತು ಆ ಸಹನೆ 
ಎಲ್ಲಿತ್ತು ಆ ಕರುಣೆ 
ನೀನಾದೆ ನನ್ನ ಸದ್ಗೃಹಿಣಿ
ನಾನ್ಹೇಗೆ ತೀರಿಸಲಿ ನಿನ್ನ ಋಣವ ...?!

ವಿಧಿಯಾಟದ ಜಂಜಾಟದಲಿ
ಸಿಹಿ - ಕಹಿಯ ನೆರಲಾಟದಲಿ 
ಸುಖ - ದುಃಖಗಳ ಮನದಾಟದಲಿ
ಈ ಮಾಯಾಲೋಕದ ದೊಮ್ಮರಾಟದಲಿ 
ಸಿರಿ - ಸಂಪದ ಬೇಡದೆ , ಕಾಡದೆ 
ನನ್ನ ಸುಖವಾಚಕಲಾಗಿರುವೆ,
ನನ್ನ ಮನದ ಸಿರಿ ನೀನಾಗಿರುವೆ ..!!

ನಮಗಿರುವುದು ನಾಲ್ಕು ದಿನ 
ಹುಟ್ಟು - ಸಾವು ಎರಡು ದಿನ 
ಬದುಕು ಬಂಗಾರವಾಗಿಸೋಣ 
ಉಳಿದೆರಡು ದಿನ 
ಕ್ಷಣ, ಕ್ಷಣ ಅನುಭವಿಸೋಣ 
ಆನಂದದ ಮನ 
ಅದುವೇ ನಮ್ಮ ಜೀವನ
ಆ ಮಧುರ ಕ್ಷಣ ಬರಲಿ 
ನಮ್ಮಿಬ್ಬರ ಮರಣ..!!!

                                             -
ಶೂಜ್ಞ

No comments:

Post a Comment