^^ ಕಾಲಮಿರಿತ್ತು ಕಾಗೆ ಹಾರುತ್ತಿತ್ತು ^^
ಶೂನ್ಯದಿ ಜನಸಿ
ಜನನಿಯ ಜಪಿಸಿ
ನವರಂದ್ರದಿ ದೇಹವರಳಿಸಿ
ಬೆರುಗುಗಣ್ಣ ಬೆಳಕಲಿ
ನವಜಗದಾತ್ಮಗಳ ತುಂಬಿಸಿ
ನಿರ್ಮಲ ನಿಸರ್ಗವರ್ಣಕೆ
ಮನದ ಚಿತ್ತಾರ ಬಿಡಿಸಿ
ಮುಗ್ದ ನಗುವಲ್ಲೆ
ಜಗವ ನಿಲ್ಲಿಸಿ
ನಾನಿದ್ದೇನೆ
ನಡೆ, ನಡೆ ಬಿದ್ದೆದ್ದು
ಕಲಿ, ಕಲಿ ಒತ್ತರುತ್ತರಿಸಿ
ಈ ಜಗವು ನಿನ್ನದೇ
ನಲಿ ನಲಿ ಎನ್ನಲು
ನೀನಾದೆನಾನು ....!
ಹೊಸತು, ಹೊಸತು
ಮನಸು, ಕನಸು
ಕಲಿತು, ಕಲಿತು ಕಳೆಯಿತು
ದೇಹಕರ್ಮಗಳ ಹೊತ್ತು
ನವರಂದ್ರಗಳ 'ಮತ್ತು' !
ತುಂಬಿತು ಕೊಳೆತು
ನಿನ್ನ ಮರೆತು .....!?
ಜಗದ 'ಮತ್ತು'!
ದೇಹದ ಸ್ವತ್ತು
ಕ್ಷಣಿಕ ಹೊತ್ತು
ಮಾರಮತ್ತು !
ಸುತ್ತು ಸುತ್ತು
ಎಲ್ಲಿ ಸುತ್ತರು ಸುತ್ತಲ್ಲಿಗೆ
ಬರುವುದು ಹೊತ್ತು
ಕಾಣುವುದು ಜಗದ ಕರಾಮತ್ತು
ಕಾಲಮಿರಿತ್ತು ಕಾಗೆ ಹಾರುತ್ತಿತ್ತು
ಆದರೂ, ನಾನಿದ್ದೇನೆ ಅಂದಿತು
ಆತ್ಮದಾತ್ಮ ....! - ಶೂಜ್ಞ
ಶೂನ್ಯದಿ ಜನಸಿ
ಜನನಿಯ ಜಪಿಸಿ
ನವರಂದ್ರದಿ ದೇಹವರಳಿಸಿ
ಬೆರುಗುಗಣ್ಣ ಬೆಳಕಲಿ
ನವಜಗದಾತ್ಮಗಳ ತುಂಬಿಸಿ
ನಿರ್ಮಲ ನಿಸರ್ಗವರ್ಣಕೆ
ಮನದ ಚಿತ್ತಾರ ಬಿಡಿಸಿ
ಮುಗ್ದ ನಗುವಲ್ಲೆ
ಜಗವ ನಿಲ್ಲಿಸಿ
ನಾನಿದ್ದೇನೆ
ನಡೆ, ನಡೆ ಬಿದ್ದೆದ್ದು
ಕಲಿ, ಕಲಿ ಒತ್ತರುತ್ತರಿಸಿ
ಈ ಜಗವು ನಿನ್ನದೇ
ನಲಿ ನಲಿ ಎನ್ನಲು
ನೀನಾದೆನಾನು ....!
ಹೊಸತು, ಹೊಸತು
ಮನಸು, ಕನಸು
ಕಲಿತು, ಕಲಿತು ಕಳೆಯಿತು
ದೇಹಕರ್ಮಗಳ ಹೊತ್ತು
ನವರಂದ್ರಗಳ 'ಮತ್ತು' !
ತುಂಬಿತು ಕೊಳೆತು
ನಿನ್ನ ಮರೆತು .....!?
ಜಗದ 'ಮತ್ತು'!
ದೇಹದ ಸ್ವತ್ತು
ಕ್ಷಣಿಕ ಹೊತ್ತು
ಮಾರಮತ್ತು !
ಸುತ್ತು ಸುತ್ತು
ಎಲ್ಲಿ ಸುತ್ತರು ಸುತ್ತಲ್ಲಿಗೆ
ಬರುವುದು ಹೊತ್ತು
ಕಾಣುವುದು ಜಗದ ಕರಾಮತ್ತು
ಕಾಲಮಿರಿತ್ತು ಕಾಗೆ ಹಾರುತ್ತಿತ್ತು
ಆದರೂ, ನಾನಿದ್ದೇನೆ ಅಂದಿತು
ಆತ್ಮದಾತ್ಮ ....! - ಶೂಜ್ಞ
No comments:
Post a Comment