Sunday, 31 March 2013

'ಪ್ರೀತಿ' ಎನ್ನಬೇಕೆ !!???


  'ಪ್ರೀತಿ' ಎನ್ನಬೇಕೆ !!???

ಮಾತು, ಸುತ್ತು, ಮುತ್ತು
ಮಿಲನದ ಕಸರತ್ತು!
ಜೀವನವೆಲ್ಲ ಸುಸ್ತು
ಪ್ರೀತಿ ಆಗಿದೆ ವಸ್ತು!
ಅದಕ್ಕೆ ಬೇಕಿದೆ
ಬೆದೆಯ ಮಸ್ತು!
ಪ್ರೀತಿ ಓಡಿದೆ
ಆಡಂಬರದ ಸುತ್ತು !
ಹುಡುಕಿ ನೋಡಿಹರೆ
ಮೌನದ ಸುತ್ತು!
ಬೆದಕಿ ಬೇಡಿಹರೆ
ದೇಹದ ಹೊರೆತು!
ಕನಸು ಕಂಡಿಹರೆ
ಕಾಮದೊರತು...!?

ಪ್ರೀತಿ ಮೂಡುವುದು
ಮೌನದಲ್ಲೇ!
ಆ ಮೌನವಿರುವುದು
ಮನದಲ್ಲೇ!
ಪ್ರೀತಿಯ ಅಂತ್ಯವು
ಮನಸಲ್ಲೇ!
ಮನದೊರತು
ಪ್ರೀತಿ ಇದೆಯೇ !?
ಪ್ರೀತಿಗೆ,
ಪರದೇಹದಾಸೆ ಬೇಕೇ !???
ಪರಮ ಆತ್ಮ,
ಪ್ರೀತಿಸಿದರೆ ಸಾಕಲ್ಲವೇ !
ದೇಹಪ್ರೀತಿಗೆ,
'
ಪ್ರೀತಿ' ಎನ್ನಬೇಕೆ !!???

                                                     -
ಶೂಜ್ಞ

No comments:

Post a Comment