Sunday, 31 March 2013

ನಾ ಉತ್ತರಿಸುವೆ ನೋಡು ..!


      ನಾ ಉತ್ತರಿಸುವೆ ನೋಡು ..!


ಸುಖ ಸಾಗರದಲ್ಲೆನಿದೆ ಸುಖ ನಿದ್ದೆಯ ಬಿಟ್ಟು
ಸುನಾಮಿಗೆ ಎದೆಯೋಡ್ಡಿದಾಗಲೇ ನಿಜಪ್ರೀತಿಯ ಅರಿವು!

ತಂಗಾಳಿಯ ತಂಪಲ್ಲಿನಿದೆ ಕ್ಷಣ ಸುಖವ ಬಿಟ್ಟು!?
ಜೀವನದ ಬಿರುಗಾಳಿಗೆ ಎದುರು ನಿಂತರೆ
ಜಗವೇ ನಿನ್ನ ಮುಂದೆ ಮಂಡಿಯುರುವುದು

ಹೂವಿಗೆ ಇಬ್ಬನಿ ಚೆಂದ !
ನಿನ್ನ ಪ್ರೀತಿಗೆ ಹಿಮಪಾತವು ಕರಗಿದ ಬಂಧ

ನಿನ್ನ ಮನವು ಶಾಂತಿಯ ಹೂಮನವು
ನಿನ್ನಾತ್ಮವು ಆಗಲಿ ದಗಸಿದ ಬಂಗಾರವೂ !

ಸಿಡಿಲಿಲ್ಲದ ಮಳೆಯೂ ಬರಲು ಸಾದ್ಯವೇ !
ಮೋಡವಿಲ್ಲದ ಆಗಸವ ಕಾಣಲು ಆಗುವುದೇ !?
ಶಕ್ತಿಯ ಪ್ರಹರವಿಲ್ಲದೆ ಮೊಳಕೆ ಬರಲು ಸಾದ್ಯವೇ !?

ಎಲ್ಲವು ಏಕೆ ಏಕೆ ಎಂದು ನಿನ್ನ ಮನವು ಕೇಳಲು !!?
ನನ್ನ ಕೇಳುತ್ತಿರುವೆ ಏಕೆ ಏಕೆ ಎಂದು !!??

ಗೊತ್ತಿಲ್ಲವೇ ನಿನಗೆ !!?
ಹಣ್ಣಾದ ಮೇಲೆ ಕಾಯಿ ಉದರಲೇ ಬೇಕು
ಸಮಯ ಮುಗಿದ ಮೇಲೆ ಹೂ ಬಾಡಲೇ ಬೇಕು

ನಾ ಉತ್ತರಿಸುವೆ ನೋಡು !
ಪ್ರೀತಿ ಮೂಡಿದ ಮೇಲೆ
ಎಲ್ಲವ ಅನುಭವಿಸಲೇ ಬೇಕು ...!

                                                 -
ಶೂಜ್ಞ

No comments:

Post a Comment