Saturday, 4 May 2013






ಓಂಟಿ ನಾವಿಕಳು ..!

ಪ್ರೀತಿಯ ನಾವೆಯಲಿ
ಈ ಜೀವನದ ಕಡಲಿನಲಿ
ಸದ್ದಿಲ್ಲದೆ ನಡೆದಿತ್ತು
ಪ್ರೇಮದ ಪಯಣ !

ನಡು ಕಡಲಿನಲಿ
ಸಾವಿಗೆ ನೆಪವೇಳದೆ
ನೀ ಎದ್ದು ಹೋದೆ
ಈ ಓಂಟಿ ನಾವಿಕಳ ಬಿಟ್ಟು !

ಒಮ್ಮೆಲೇ ಬಂದಿದೆ
ಮನದ ಸುಖಸಾಗರದಲಿ
ಸುಳಿಗಾಳಿ ಮಳೆ !

ಹಗಲಿರಳು ಬೆನ್ನೆತ್ತಿದೆ
ನನದೆ ನೆರಳಂತೆ
ನಿನ ನೆನಪು !

ನಾ ಬೆಚ್ಚಿಬೀಳುವ ಪರಿಗೆ
ಕಣ್ಣಂಚಲ್ಲಿ ಕಾದು ಕುಳಿತಿದೆ
ಭಾವನೆಗಳ ಜಲಪಾತ !

ಹುಕ್ಕಿ ಹರಿಯುತ್ತಿದೆ
ದುಗುಡದ ಹಾದಿಯಲ್ಲಿ
ತಡೆಗೋಡೆಗಳ ಹಂಗಿಲ್ಲದೆ !

ನಾ ಕಾಣುತ್ತಿರುವೆ
ಈ ಜಗದ ಬೆತ್ತಲು
ದುಶ್ಯಾಸನ
ಮನಗಳ ಕತ್ತಲು !

ಅಲೆದುಬ್ಬರದ
ಅಬ್ಬರಕ್ಕೆ ಶರಣಾಗಲೆ ?
ಗಾಳಿಯು ತೂರಿದ ಕಡೆಗೆ
ನಿನ ನೆನಪು ಬಿಟ್ಟು ಹೊರಡಲೇ ?
ಸಾವಿಗೂ ಅಂಜದೆ
ಎದುರು ಗಾಳಿಗೆ ನಾವೆಯ ನಡೆಸಲೆ ?

ಒಂದೇ ಪ್ರಾಣ
ಒಂದೇ ಜೀವನ
ಒಂದೇ ಮಾನ
ಒಂದೇ ದಾರಿ
ಒಂದೇ ಗುರಿ
ಅದುವೇ ನನ್ನ ಮನ !

ಮುನ್ನಡೆಸುವೆ ಮುರಿದ ಈ
ನಾವೆಯನ್ನು ನಿನ್ನ ನೆನಪಿನ ಬಲದಿಂದ
ಸಾಗುವೆ ದೂರದ ಸಂದ್ಯಾ ತೀರಕೆ
ಅದು ನಿನ್ನ ಆತ್ಮ ಸೇರುವ ಛಲದಿಂದ !

- ಶೂಜ್ಞ