Saturday, 4 May 2013






ಓಂಟಿ ನಾವಿಕಳು ..!

ಪ್ರೀತಿಯ ನಾವೆಯಲಿ
ಈ ಜೀವನದ ಕಡಲಿನಲಿ
ಸದ್ದಿಲ್ಲದೆ ನಡೆದಿತ್ತು
ಪ್ರೇಮದ ಪಯಣ !

ನಡು ಕಡಲಿನಲಿ
ಸಾವಿಗೆ ನೆಪವೇಳದೆ
ನೀ ಎದ್ದು ಹೋದೆ
ಈ ಓಂಟಿ ನಾವಿಕಳ ಬಿಟ್ಟು !

ಒಮ್ಮೆಲೇ ಬಂದಿದೆ
ಮನದ ಸುಖಸಾಗರದಲಿ
ಸುಳಿಗಾಳಿ ಮಳೆ !

ಹಗಲಿರಳು ಬೆನ್ನೆತ್ತಿದೆ
ನನದೆ ನೆರಳಂತೆ
ನಿನ ನೆನಪು !

ನಾ ಬೆಚ್ಚಿಬೀಳುವ ಪರಿಗೆ
ಕಣ್ಣಂಚಲ್ಲಿ ಕಾದು ಕುಳಿತಿದೆ
ಭಾವನೆಗಳ ಜಲಪಾತ !

ಹುಕ್ಕಿ ಹರಿಯುತ್ತಿದೆ
ದುಗುಡದ ಹಾದಿಯಲ್ಲಿ
ತಡೆಗೋಡೆಗಳ ಹಂಗಿಲ್ಲದೆ !

ನಾ ಕಾಣುತ್ತಿರುವೆ
ಈ ಜಗದ ಬೆತ್ತಲು
ದುಶ್ಯಾಸನ
ಮನಗಳ ಕತ್ತಲು !

ಅಲೆದುಬ್ಬರದ
ಅಬ್ಬರಕ್ಕೆ ಶರಣಾಗಲೆ ?
ಗಾಳಿಯು ತೂರಿದ ಕಡೆಗೆ
ನಿನ ನೆನಪು ಬಿಟ್ಟು ಹೊರಡಲೇ ?
ಸಾವಿಗೂ ಅಂಜದೆ
ಎದುರು ಗಾಳಿಗೆ ನಾವೆಯ ನಡೆಸಲೆ ?

ಒಂದೇ ಪ್ರಾಣ
ಒಂದೇ ಜೀವನ
ಒಂದೇ ಮಾನ
ಒಂದೇ ದಾರಿ
ಒಂದೇ ಗುರಿ
ಅದುವೇ ನನ್ನ ಮನ !

ಮುನ್ನಡೆಸುವೆ ಮುರಿದ ಈ
ನಾವೆಯನ್ನು ನಿನ್ನ ನೆನಪಿನ ಬಲದಿಂದ
ಸಾಗುವೆ ದೂರದ ಸಂದ್ಯಾ ತೀರಕೆ
ಅದು ನಿನ್ನ ಆತ್ಮ ಸೇರುವ ಛಲದಿಂದ !

- ಶೂಜ್ಞ


Thursday, 11 April 2013




ಆ ಬದುಕಿಗೆ ಅನಂತ ದಾರಿಗಳು ..!!

ಕಾಣದೂರಿಂದ ಬಂದಿರುವೆ
ಕೊಳುಕು ಮನಸ್ಸುಗಳ ಮದ್ಯೆ ಬೆಳೆದಿರುವೆ
ಬೀದಿಗಳ ಬದಿಯೇ ನನ್ನ ಬದುಕು
ಆ ಬದುಕಿಗೆ ಅನಂತ ದಾರಿಗಳು
ಬೆಳಕೆಯಿಲ್ಲದ ಆ ದಾರಿಗಳ ಕಂಡು ನಾ ಬೆದರಬೇಕೆ !?
ಸಾಗುತ್ತಿದೆ ನನ್ನ ಹಾದಿ ಅನಾಥ ರಸ್ತೆಗಳ ಮೇಲೆ
ಮುರಳಿಗಾನಾಮೃತದ ಜೀವದ ಕೊಳಲಿನೊಂದಿಗೆ
ಕನಸುನನಸುಗಳ ಹಂಬಳವಿಲ್ಲದ ಈ ಮನಸ್ಸಿಗೆ
ಕೊಳಲ ರಾಗದಲ್ಲಿ ಉಸಿರಾಗಿರುವುದೊಂದೆ ಗೊತ್ತು !
ಅರ್ಥವಿಲ್ಲದ ಈ ಜಗದ ಬದುಕಿನಲ್ಲಿ
ಆಗಾಗ ಈ ರೀತಿ ಎದುರಾಗುವೆವು
ಆತ್ಮದ ಗೆಳೆಯರನ್ನ ಯಾವುದೇ ಅಂತರವಿಲ್ಲದೆ !
ಆಲಿಸುವೆವು ಎದೆಯ ಮೀಟಿ ಬಂದ ಭಾವರಾಗಗಳ ಮಿಲನವನ್ನ...!

               - ಶೂಜ್ಞ









ಕತ್ತಲೆ ಸುತ್ತಲು ..!


ಗಗನ ಚಾಚುವ ಕೈಗಳಿಗೆ 
ಚಂದಿರನಲಿ ಕಣ್ಣು...
ತುತ್ತನಿಡುವ ಮೊದಲೂ 
ಮುತ್ತನೀವ ಮತ್ತಲೂ

ಕತ್ತಲೆ ಸುತ್ತಲು 
ಮೆತ್ತನೆ ಮತ್ತಲ್ಲು
ತುಂಬಿದ ಚಂದಿರಿನ ಕಾಣಲು
ಗಿರಿಕನಿಜವೆ ಆಗಿತ್ತು
ಅವನ ಬೊರ್ಗೆರೆತ
ನಾಚಿತು ಅಲೆಗಳ ಹಾಲ್ನೊರೆತ ..

ಗಗನವ ಹಿಡಿತಬ್ಬಲು
ಗಾಳಿಯೆ ಕಂಗಾಲು
ಮೊದಲ ಹನಿಗೆ 
ಮಣ್ಣು ವಾಸನೆ ಬೀರಿತು
ನವಿಲುಗರಿ ನಾಚಿರಳಿತು..
                        

                                               - ಶೂಜ್ಞ

Sunday, 31 March 2013

ನಿನನೆನಪಿನೊಳಿಗಿಹದೊಂದು !


 ನಿನನೆನಪಿನೊಳಿಗಿಹದೊಂದು !

ನಿನನೆನಪಿನೊಳಿಗಿಹದೊಂದು !
ಸಾಗರಮಂಥನದಾಮೃತಬಿಂದು !
ಪ್ರತಿಕ್ಷಣದೊಳುಮನಮಂಥನದಲಿಧಹಿಸಿಬಂದು !
ಮನಸಾಗರಹುಕ್ಕಿಹರಿಯುತಿದೆಬಯಲುಸೀಮೆಯಲ್ಲಿಂದು !
ನೀಹರಿದೆಡೆಯಲೆತೆನೆಯತಂಗಾಳಿಸುಯುವುದುದೆಂದೆಂದು !
ಹೂದೋಟಗಂಧಗಂಧರ್ವಕಿನ್ನರರಾಗವರಳಿದೆಮನದಲ್ಲಿಂದು !
ದೇಹಮನಭವಸಾಗರಸಂಬಂಧಗಳಿಗೆಮೀರಿದಬಂಧುಗಳಿವಳೆಂದೆಂದೆಂದು ... !!

ನನ್ನಾತ್ಮಸಾಗರದಲಿರಳಿದಾತ್ಮಲಿಂಗದಪೂಜಿತರಮನೀಯರಾಗವೇ !
ನಿನರಾಗತಾಳಭಾವಕರುಣೆಯಹಾದಿಗೆಭವಸಾಗರಸಂಬಂಧಗಳಂಗೇಕೆ !?
ಕಾರ್ಕಟಕಪ್ಪುಮನದವಿಶಜಂತುಗಳವಿಕಾರಕುರೂಪಿಗಳಿಸರ್ಜಿತಸಮಾಜಕೆದುರುವೇಕೆ !?
ಕಪ್ಪುಕತ್ತಲಲ್ಲೂನನ್ನಾತ್ಮದಬೆಳುಕುಚೆಲ್ಲಿಕಾಯುವೆನನಗಾಗಿಮತ್ತೆನೀಬರುವೆಯೆಂದು !?
ನಿನನೆನಪಿನೊಳಿಗೆನಾನಿಹನೆಂದೆಂದುನಿನಪೂಜಿತಾತ್ಮದೊಳುವಿಚಲಿತನಾಗಿನಿಂದು !?

                                                                                                                - ಶೂಜ್ಞ

ನೀ ಹೊರಡು !????


 ನೀ ಹೊರಡು !????

ಮದವೇರಿ ಮತಿಹೀನನಾದೆಯ !?
ಬೆದೆಯೇರಿ ಬೇಲಿಯನ್ನೇ ಮೇಯ್ದೆಯಾ !?
ಹಾಲುಂಡ ಹಾಲ್ಕೆಚ್ಚಲ್ಲನ್ನೆ ನೋಡಿ ಅಮಲೇರಿದಿಯಾ!?
ಸ್ವಚ್ಚ ಸಂಬಂಧಗಳ ರಕ್ತ ಹೀರುವೆಯಾ !?

ಪಂಚೇಂದ್ರಿಯಗಳು ಪಂಚಾಕ್ಷರಿಯ ಕಾಣಿಕೆಗಳು !
ನವರಂಧ್ರಗಳು ನವಮಾಸದ ರೂಪಗಳು !
ನವರಸಗಳು ನವಮಾನವನ ದಾರಿದೀಪಗಳು !
ಮರೆತೆಯಾ !? ಮಾತೆಯ ಮಮತೆಗಳು ..!
ಎಯ್ !, ರಕ್ತ ಪಿಪಾಸು ದೇಹವೆ,
ನೀ ಹೊರಡು !????
ನಿನಿಲ್ಲದ ಆ ಸುಂದರ ಜಗವ ನೋಡಲು
ಆತ್ಮಗಳ ಲೋಕ ಕಾಯುತ್ತಿದೆ
ನಿ‌ಶ್ಕಲ್ಮಶ ಆತ್ಮಬಂಧುವಿಗೆ....

                                                                                  -  ಶೂಜ್ಞ

ಕಲ್ಪವಲ್ಲಿ..... !


 ಕಲ್ಪವಲ್ಲಿ..... !

ಅಣುವಣುವಿಗೆ ಅರಿವಿದೆ
ಅರಳಿಸಿದ ಕೈಗಳು
ಹಾಲುನಿಸಿದ ಆತ್ಮೀಯಳು
ಮನೆಮನೆ ಬೆಳುಗುವವಳು
ಸಕಲ ಬಂಧಗಳಿಗು
ಬಂಧುಗಳಿವಳು !
ನಿನ ಕನಸಿಗೆ, ನಿನ ಮನಸ್ಸಿಗೆ
ನಿನ ನೋವಿಗೆ ಕರುಗುವ
ಕಲ್ಪವಲ್ಲಿಯಿವಳು !
ನಿನ ಜೀವದುಸಿರು ನೀಡಿದ
ಅಮೃತಧಾರೆಯಿವಳು !
ಅವಳೆ ಈ ಜಗದ ಹೆಣ್ಮಗಳು....!

                                               -  ಶೂಜ್ಞ

“¤Ã ¥ÉæÃ¬Ä¹AiÉÆÃ CxÀªÁ UɼÀwAiÉÆÃ . . .!”


“¤Ã ¥ÉæÃ¬Ä¹AiÉÆÃ CxÀªÁ UɼÀwAiÉÆÃ . . .!”

£À£ÁßvÀäzÀ®Ä ¥ÀævÁåvÀä PÀAqÉ !
UÀjPÉAiÀÄ E§â¤ PÀAqÀAvÉ
ªÉÆUÀÎgÀ½zÀ ºÀƪÀAvÉ
§tÚzÀ amÉÖAiÀÄAvÉ
£Á PÀAqÉ CzÀÄ ¤£ÀzÉ ¥ÀæwgÀÆ¥À . . .

ªÀÄ£À¸ÀÄì ªÀÄvÀÄÛ ºÀÈzÀAiÀÄzÀ
£ÀqÀÄªÉ DvÀäzÀ vÀįÁ¨sÁgÀ £Àqɹ !
¸Á«gÀ ¨sÁªÀ£ÉUÀ¼À ©A§PÉ
DvÀä¸ÁQëAiÀÄ PÀzÀ«QÌ !
£Á PÀAqÉ £À£ÁßvÀäzÀ ¥ÀæwgÀÆ¥À . . .

PÀët ªÀiÁvÀæzÀ ¤£À PÀuÉÆÚ°à£À°
ªÀÄ£À©aÑ ªÀÄÄwÛlÖ ¤£À ªÀiÁvÀÄUÀ¼À° !
¨sÀÆzÉëAiÀÄÄ PÁt®Ä ¤£À ¸ËAzÀAiÀÄðzÀ°
D DUÀ¸ÀªÀ PÁt®Ä ¤£À ªÀÄ£À¹jAiÀİ !
£Á PÀAqÉ £À£ÁßvÀäªÀÅ ¤£Àß°ègÀ®Ä .

                                                               - ಶೂಜ್ಞ

ಆತ್ಮವೇ ಎಲ್ಲವ ಆವರಿಸಿ ಅವತರಿಸಿದೆ ಇಂದು !!


. ಆತ್ಮವೇ ಎಲ್ಲವ ಆವರಿಸಿ ಅವತರಿಸಿದೆ ಇಂದು !!

ಕಂಗಳು ಮುಚ್ಚಿವೆ ತನಗೆ ಕಾಣುವುದೇ ಬೇಡವೆಂದು
ಕಿವಿಗಳು ಕೇಳಿವೆ ತನೆಗೆ ಕೇಳಿಸುವುದು ಬೇಡವೆಂದು
ಬಾಯಿಯು ಬೇಡಿತಿದೆ ಮಾತು ಬೇಡವೆಂದು
ಮನಸು ಕೊರಗುತಿದೆ ತನಗೆ ಮನಸು ಏಕಿದೆ ಎಂದು
ಜೀವವು ಚೀರುತಿದೆ ತನಗೆ ಈ ದೇಹವೇ ಬೇಡವೆಂದು
ಆತ್ಮವೇ ಎಲ್ಲವ ಆವರಿಸಿ ಅವತರಿಸಿದೆ ಇಂದು
ಎಲ್ಲ ಮರ್ಮಗಳು ಕರಗಿ ಬೇಡುತಿವೆ ನಮಗೇನು ಬೇಡವೆಂದು
ಆತ್ಮ ಭೋಧಿ ಭೋಧಿಸುತಿದೆ ಎಲ್ಲವು ನೀವೇ ಕಾಣುವಿರೆಂದು
ಅನಂತ ಭಾವನೆಗಳ ಅಲೆಗಳಿಗೆ ಕದಡಿದೆ ಮನಸಿನ ಮರ್ಮಗಳು ಇಂದು
ಮನಸಿನ ಅರೆಬಿದಿಗೆ ತುಂಬಿ ತುಣುಕಿದೆ  ಭೋದಿಯಾಗಿ ಬಂದು.

                                                                                                 -
ಶೂಜ್ಞ

' ಯೊವ್ವನ ! ಜೀವನ !? '


     ' ಯೊವ್ವನ ! ಜೀವನ !? ' 

ಜಿವ್ವನೆ ಯೊವ್ವನ ಕಾಡಿದೆ ಕಾಮನ 
ಸಂಜ್ಞೆಯ ಮೋಡಿಗೆ ಕಾದಿದೆ ಜೋಮನ
ರಿವ್ವನೆ ರಿಂಗಣ ಮನದ ಮಂಗನ 
ಹಸಿದ ಬೆಸುಗೆ ಮೊಗ್ಗಿನ ಹರಣ 
ಸಂಸಾರ ಸಂಸ್ಕಾರ ಸಮಾಜ ಮರಣ ..!

ಸತಿ ಪತಿ ಜೀವ ಶೃತಿ 
ಅತಿ ಮದ ಮತಿ ಗತಿ 
ಕಾಣದು ಜಗತಿ ಕಣ್ಣಿಗೆ ಕಾಮತಿ 
ಮಮತೆ ಮರೆತು ಓಡಿದೆ ಸುಮತಿ 
ಜಗದ ಸುಳಿಗೆ ಹರಕೆ ಕೊಟ್ಟಿವೆ 
ನಂಬಿದ ಅಂಧರು ಕಂದರು ...!

ಮೇಲಣ ಬೀಳನ ಕಾಮನ 
ಹಿಡಿಸಿರೆ ಬಿಗುಮಾನ! 
ಸಡಿಸಿರೆ ಅಡಮಾನ !
ನಡಿಸಿರೆ ನರಿಗಾನ !
ಇದೆಕ್ಕೆಲ್ಲಿ ಜುಲುಮಾನ !?
ಸರಿಯೇ ತಾಯಿಯ ಸಮಾನ 
ಸಮಾಜ ತಂದೆಯ ಪ್ರಮಾಣ ..!

                                                              -
ಶೂಜ್ಞ