Thursday, 11 April 2013




ಆ ಬದುಕಿಗೆ ಅನಂತ ದಾರಿಗಳು ..!!

ಕಾಣದೂರಿಂದ ಬಂದಿರುವೆ
ಕೊಳುಕು ಮನಸ್ಸುಗಳ ಮದ್ಯೆ ಬೆಳೆದಿರುವೆ
ಬೀದಿಗಳ ಬದಿಯೇ ನನ್ನ ಬದುಕು
ಆ ಬದುಕಿಗೆ ಅನಂತ ದಾರಿಗಳು
ಬೆಳಕೆಯಿಲ್ಲದ ಆ ದಾರಿಗಳ ಕಂಡು ನಾ ಬೆದರಬೇಕೆ !?
ಸಾಗುತ್ತಿದೆ ನನ್ನ ಹಾದಿ ಅನಾಥ ರಸ್ತೆಗಳ ಮೇಲೆ
ಮುರಳಿಗಾನಾಮೃತದ ಜೀವದ ಕೊಳಲಿನೊಂದಿಗೆ
ಕನಸುನನಸುಗಳ ಹಂಬಳವಿಲ್ಲದ ಈ ಮನಸ್ಸಿಗೆ
ಕೊಳಲ ರಾಗದಲ್ಲಿ ಉಸಿರಾಗಿರುವುದೊಂದೆ ಗೊತ್ತು !
ಅರ್ಥವಿಲ್ಲದ ಈ ಜಗದ ಬದುಕಿನಲ್ಲಿ
ಆಗಾಗ ಈ ರೀತಿ ಎದುರಾಗುವೆವು
ಆತ್ಮದ ಗೆಳೆಯರನ್ನ ಯಾವುದೇ ಅಂತರವಿಲ್ಲದೆ !
ಆಲಿಸುವೆವು ಎದೆಯ ಮೀಟಿ ಬಂದ ಭಾವರಾಗಗಳ ಮಿಲನವನ್ನ...!

               - ಶೂಜ್ಞ









ಕತ್ತಲೆ ಸುತ್ತಲು ..!


ಗಗನ ಚಾಚುವ ಕೈಗಳಿಗೆ 
ಚಂದಿರನಲಿ ಕಣ್ಣು...
ತುತ್ತನಿಡುವ ಮೊದಲೂ 
ಮುತ್ತನೀವ ಮತ್ತಲೂ

ಕತ್ತಲೆ ಸುತ್ತಲು 
ಮೆತ್ತನೆ ಮತ್ತಲ್ಲು
ತುಂಬಿದ ಚಂದಿರಿನ ಕಾಣಲು
ಗಿರಿಕನಿಜವೆ ಆಗಿತ್ತು
ಅವನ ಬೊರ್ಗೆರೆತ
ನಾಚಿತು ಅಲೆಗಳ ಹಾಲ್ನೊರೆತ ..

ಗಗನವ ಹಿಡಿತಬ್ಬಲು
ಗಾಳಿಯೆ ಕಂಗಾಲು
ಮೊದಲ ಹನಿಗೆ 
ಮಣ್ಣು ವಾಸನೆ ಬೀರಿತು
ನವಿಲುಗರಿ ನಾಚಿರಳಿತು..
                        

                                               - ಶೂಜ್ಞ