ಆ ಬದುಕಿಗೆ ಅನಂತ ದಾರಿಗಳು
..!!
ಕಾಣದೂರಿಂದ ಬಂದಿರುವೆ
ಕೊಳುಕು ಮನಸ್ಸುಗಳ ಮದ್ಯೆ ಬೆಳೆದಿರುವೆ
ಬೀದಿಗಳ ಬದಿಯೇ ನನ್ನ ಬದುಕು
ಆ ಬದುಕಿಗೆ ಅನಂತ ದಾರಿಗಳು
ಬೆಳಕೆಯಿಲ್ಲದ ಆ ದಾರಿಗಳ ಕಂಡು ನಾ ಬೆದರಬೇಕೆ
!?
ಸಾಗುತ್ತಿದೆ ನನ್ನ ಹಾದಿ ಅನಾಥ ರಸ್ತೆಗಳ ಮೇಲೆ
ಮುರಳಿಗಾನಾಮೃತದ ಜೀವದ ಕೊಳಲಿನೊಂದಿಗೆ
ಕನಸುನನಸುಗಳ ಹಂಬಳವಿಲ್ಲದ ಈ ಮನಸ್ಸಿಗೆ
ಕೊಳಲ ರಾಗದಲ್ಲಿ ಉಸಿರಾಗಿರುವುದೊಂದೆ ಗೊತ್ತು
!
ಅರ್ಥವಿಲ್ಲದ ಈ ಜಗದ ಬದುಕಿನಲ್ಲಿ
ಆಗಾಗ ಈ ರೀತಿ ಎದುರಾಗುವೆವು
ಆತ್ಮದ ಗೆಳೆಯರನ್ನ ಯಾವುದೇ ಅಂತರವಿಲ್ಲದೆ !
ಆಲಿಸುವೆವು ಎದೆಯ ಮೀಟಿ ಬಂದ ಭಾವರಾಗಗಳ
ಮಿಲನವನ್ನ...!
-
ಶೂಜ್ಞ
No comments:
Post a Comment