ನೀ ಹೊರಡು !????
ಮದವೇರಿ ಮತಿಹೀನನಾದೆಯ !?
ಬೆದೆಯೇರಿ ಬೇಲಿಯನ್ನೇ ಮೇಯ್ದೆಯಾ !?
ಹಾಲುಂಡ ಹಾಲ್ಕೆಚ್ಚಲ್ಲನ್ನೆ ನೋಡಿ ಅಮಲೇರಿದಿಯಾ!?
ಸ್ವಚ್ಚ ಸಂಬಂಧಗಳ ರಕ್ತ ಹೀರುವೆಯಾ !?
ಪಂಚೇಂದ್ರಿಯಗಳು ಪಂಚಾಕ್ಷರಿಯ ಕಾಣಿಕೆಗಳು !
ನವರಂಧ್ರಗಳು ನವಮಾಸದ ರೂಪಗಳು !
ನವರಸಗಳು ನವಮಾನವನ ದಾರಿದೀಪಗಳು !
ಮರೆತೆಯಾ !? ಮಾತೆಯ ಮಮತೆಗಳು ..!
ಎಯ್ !, ರಕ್ತ ಪಿಪಾಸು ದೇಹವೆ,
ನೀ ಹೊರಡು !????
ನಿನಿಲ್ಲದ ಆ ಸುಂದರ ಜಗವ ನೋಡಲು
ಆತ್ಮಗಳ ಲೋಕ ಕಾಯುತ್ತಿದೆ
ನಿಶ್ಕಲ್ಮಶ ಆತ್ಮಬಂಧುವಿಗೆ....
- ಶೂಜ್ಞ
No comments:
Post a Comment