Sunday, 31 March 2013

' ಬಂಗಾರದ ಹುಡುಗಿ'


     ' ಬಂಗಾರದ ಹುಡುಗಿ'

ಬಂಗಾರದ ನೀರೊಳು
ಸಿಂಗಾರವ ಮಾಡಿದಂತ
ನಿನ ಮೈ ಕಾಂತಿಗೆ
ಆ ಸೂರ್ಯಕಾಂತಿಯಾ
ಎಳಸು ಕಿರಣಗಳ ಹೊಳಪಿಗೆ
ಸುವರ್ಣದ ಬೊಂಬೆಯಂತೆ
ನೀ ಕಾಣುತಿರಲು
ನಿನ ಸೊಂಪಾದ ಕಪ್ಪುಕೂರಲು
ನಿನ ಉಬ್ಬಾದ ಸೊಂಟದ
ಮೇಲೆ ನಾಟ್ಯವಾಡುತಿರಲು ಚೆಲುವೆ
ಕೋಗಿಲೆಯು ದ್ವನಿಯೇರಿಸಿ ಹಾಡುತಿರಲು
ಈ ಜೀವ ನಿನ್ನಲ್ಲಿ ಸೇರಿ
ಮಧುರ ಗಾನ ಹಾಡುತಿರಲು
ನನ್ನ ದೇಹ ಅಲ್ಲಿ ಜಡವಾಗಿ ಬಿದ್ದಿದೆ ...

                                                            -
ಶೂಜ್ಞ

No comments:

Post a Comment