Sunday, 31 March 2013

"ಈ ಕುರುಡು ಮನದಲಿ, ಆ ಹುಳುಗಳ ಸಂತೆಯಲಿ "!!!


 "ಈ ಕುರುಡು ಮನದಲಿ, ಆ ಹುಳುಗಳ ಸಂತೆಯಲಿ "!!!

ಮೋಸ ಹೋಗುವ ತನಕ ನೀ ಜೊತೆಯಾದೆ 
ಮೋಸ ಹೋದ ಮೇಲೆ ನೀನೆಲ್ಲಿ ಹೋದೆ I
ಆ ಮೋಸಕ್ಕೆ ಮೋಸ ಮಾಡಿ ಹೋದೆಯಾ ಜಗದಿ 
ಆ ಮೊಸದಲ್ಲೂ ನಿನ್ನ ಮುಗ್ಧ ನಗುವೇ ಕಾಣುತಿರಲು
ನಾನ್ಹೇಗೆ ನಂಬಲಿ ನಿಂದು ಕರುಣೆಯಿಲ್ಲದ ಮೋಸವೆಂದು ....II

ಸಾಲು, ಸಾಲು ಸೋಲಲ್ಲೂ ಸಿಹಿಯ ಮುತ್ತಿಟ್ಟು 
ಸೋಲು, ಸೋಲನ್ನು ಗೆಲ್ಲಿಸಿದೆ ನೀನು
ನೀನೆ ಕಾಣೆಯಾದರೆ ಈ ಕಣ್ಣೀರು ಒರೆಸುವರ್ಯಾರು !?
ಮೋಸ ಹೋಗುವ ತನಕ ನೀ ಜೊತೆಯಾದೆ 
ಮೋಸ ಹೋದ ಮೇಲೆ ನೀನೆಲ್ಲಿ ಹೋದೆ....II

ದಾರಿ ಕಾಣದಾಗಿದೆ ಕಾಲನ ಕತ್ತಲಲ್ಲಿ !
ಎಣ್ಣೆ ಇಲ್ಲದೆ ಬತ್ತಿ ಹೋಗಿದೆ ಎನ್ನೆದೆಯಾ ದೀಪ 
ಕುರುಡು ಕಣ್ಣಲ್ಲಿ ನಾನೆಲ್ಲಿ ಹುಡುಕಲಿ ಬೆಳಕ 
ನಿನ್ನ ನೆರಳನ್ನೇ ನೀ ಕಡೆಗಣಿಸಿದರೆ 
ಕಾಣುವುದೇ ಜ್ಞಾನದ ಬೆಳಕ 
ಮೋಸ ಹೋಗುವ ತನಕ ನೀ ಜೊತೆಯಾದೆ 
ಮೋಸ ಹೋದ ಮೇಲೆ ನೀನೆಲ್ಲಿ ಹೋದೆ ...II

ನೀ ಹುಟ್ಟಿಂದ ಇದ್ದೆ ನನ್ನೊಡನೆ 
ನೀ ನುಡಿದಂತೆ ನಡದೆ 
ನೀ ಆಡಿಸಿದಂತೆ ನಾನಡಿದೆ
ನಾನೆಂದು ನನಗಾಗಿ ಬೇಡಲಿಲ್ಲ 
ಬೇಡಿದ್ದು ಒಂದೇ 'ಪ್ರೀತಿ' 
ಬಯಸಿದ್ದು ಒಂದೇ 'ಗೆಳತಿ' 
ಒಮ್ಮಲೆ ಮೋಸ ಮಾಡಿ 
ಈ ದೇಹವ ಬಿಟ್ಟು ಹೋದೆಯಾ ನನ್ನಾತ್ಮವೇ 
ಈ ಕುರುಡು ಮನದಲಿ, ಆ ಹುಳುಗಳ ಸಂತೆಯಲಿ 
ನಾನ್ಹೇಗೆ ಪಡೆಯಲಿ 'ಪ್ರೀತಿ', 'ಗೆಳತಿ'
ಮೋಸ ಹೋಗುವ ತನಕ ನೀ ಜೊತೆಯಾದೆ 
ಮೋಸ ಹೋದ ಮೇಲೆ ನೀನೆಲ್ಲಿ ಹೋದೆ ...II 

                                                             -
ಶೂಜ್ಞ

No comments:

Post a Comment