Sunday, 31 March 2013

ಸಾಕ್ಷಿಯಾಗಿ ....!


       ಸಾಕ್ಷಿಯಾಗಿ ....!

ತಿರಳು ತಿರುಗಿವೆ ಸಹಸ್ರ ಋತುವಿಗೆ ಸಾಕ್ಷಿಯಾಗಿ
ತಿರುತಿರುಗಿ ಹುರಿದಿವೆ ಬನಕೆ ಬೆಂಕಿಯಾಗಿ
ಅಗೆದಗೆದು ಅರೆದಿದೆ ಅದಿರದಿರ ಅಚ್ಚಿಗೆ
ಎತ್ತರದತ್ತರ ಹಾರುತ್ತಿವೆ ಅಂದಗೊಂದಳದ ಮೇಲೆ
ಒರೆಹಚ್ಚಿ ನೋಡಿಹವು ಇನ್ನೇನಿದೆ ಇಲ್ಲಿರಿಸಲು!?
ಹುಟ್ಟಿದ ಬುದ್ಧಿಗೆ, ಹಚ್ಚಿದ ಬೆಂಕಿಗೆ, ತಿನ್ನುವ ಹಮ್ಮಿಗೆ,
ಕೊಬ್ಬಿದ ಕಾಮಕೆ, ಕಟ್ಟಿದ ಕೋಟೆಗೆ, ಬೆಳೆದಿಹ ನಾಡಿಗೆ,
ಬೀಜಾಸುರರ ಈ ಜಾತಿಗೆ, ಕೊನೆ ಎಲ್ಲಿಗೆ !?
ಉಳಿದಿರುವುದಾದರು ಏನು ...!?
ಉಳಿಸುವುದಾದರು ಏನು ...!?

                                                                      -
ಶೂಜ್ಞ

No comments:

Post a Comment