Sunday, 31 March 2013

**ಕರುಣೆಯ ಕನ್ನಡಿ, ಈ ಕನ್ನಡ**


 **ಕರುಣೆಯ ಕನ್ನಡಿ, ಈ ಕನ್ನಡ**

ಕನ್ನಡ, ಕನ್ನಡ, ಕನ್ನಡ
ಇದು ಕನ್ನಡಾಂಬೆಯ ಕನ್ನಡ ..೧
ಕರುಣೆಯ ಕನ್ನಡಿ, ಈ ಕನ್ನಡ
ಚೆಲುವಿಗೆ ಮುನ್ನುಡಿ, ಈ ಕನ್ನಡ
ಪರರಿಗೆ ಅಚ್ಚರಿ, ಈ ಕನ್ನಡ
ರಕ್ಷಿಸೋ, ಈ ನಾಡ ಕನ್ನಡ
ಗಡಿ ದಾಟಲಿ ನಮ್ಮ ಕನ್ನಡ
ಕನ್ನಡ, ಕನ್ನಡ, ಕನ್ನಡ
ಇದು ಕನ್ನಡಾಂಬೆಯ ಕನ್ನಡ ..೨

ಎದ್ದೇಳು , ಎದ್ದೇಳೋ ಕನ್ನಡಿಗ !
ಕನ್ನ್ತೆರೆದು ನೋಡು ನೀಸಾಹಾಸಿಗ.. ೧
ಕನ್ನ ಹಾಕಿಹರು ಕನ್ನಡದ ಕಂದರಕೆ
ಕಲ್ಲೆಸೆದಿಹರು ಕನ್ನಡದ ಕನ್ನಡಿಗೆ
ಕಲ್ಲು, ಕಲ್ಲುನ್ನು ಹೂವಾಗಿ ಆರಳಿಸಿ
ತಿಳಿಸು ಮಂದಿಬ್ರಾಂತರಿಗೆ !
ಇದು ಕನ್ನಡದ ನೆಲವೆಂದು
ಕರುಣೆಯ ಬೀಡೆಂದು
ಎದ್ದೇಳು , ಎದ್ದೇಳೋ ಕನ್ನಡಿಗ !
ಕನ್ನ್ತೆರೆದು ನೋಡು ನೀಸಾಹಾಸಿಗ.. ೨

ಹಾಡಿರೋ,ಹಾಡಿರೋ ಕನ್ನಡ
ಕೆಚ್ಹೇದೆಯಲಿ ತುಂಬಿರಲಿ ಕನ್ನಡ...೧
ಇದ್ದರೆ ವಿಶ್ವಮತದ ನಂಟ
ಎದ್ದರೆ ಎಂಟೆದೆಯ ಬಂಟ
ನಂಬಿದರೆ ಕೊನೆಗಂಟ !
ಕೆಣಕಿದರೆ ಹರನ ಕಟ, ಕಟ !
ಹಾಡಿರೋ,ಹಾಡಿರೋ ಕನ್ನಡ
ಕೆಚ್ಹೇದೆಯಲಿ ತುಂಬಿರಲಿ ಕನ್ನಡ...೨

ಆ ಹಿಮಾಲಯದ ಮೇರು ಶಿಖರ
ಈ ಸಿರಿವರ್ಣಾಕ್ಷರಗಳ ನಮ್ಮ ಕನ್ನಡ...೧
ಬೆಳಗಿತು ಸಾಹಿತ್ಯ ಸುವರ್ಣದಾತ್ಮಗಳ ಸಂಗಡ
ಕಲ್ಪನೆಗೆ ನಿಲಕದು ಕವಿಕಾವ್ಯಗಳ ಕನ್ನಡ
ಸಂಗೀತ ಸಾಗರದ ಸಾರಥಿ ಈ ಕನ್ನಡ
ಇದು ಕನಕ, ಪುರಂದರರು, ಧ್ಯಾನಿಸಿದ ಕನ್ನಡ
ಸಂಸ್ಕೃತಿ, ಶಿಲ್ಪಕಲೆಯ ತವರೂರು ಈ ಕನ್ನಡ
ವೀರ ಪರಂಪರೆಯ ನಾಡು ಈ ಕನ್ನಡ
ಆ ಹಿಮಾಲಯದ ಮೇರು ಶಿಖರ
ಈ ಸಿರಿವರ್ಣಾಕ್ಷರಗಳ ನಮ್ಮ ಕನ್ನಡ...೨

ಹಳ್ಳಿ, ಹಳ್ಳಿಯ ಉಡುಗೊರೆ ಈ ಕನ್ನಡ
ಗಲ್ಲಿ, ಗಲ್ಲಿಯಲ್ಲೂ ಬೆಳಗಲಿ ನಮ್ಮ ಕನ್ನಡ ..೧
ವಿಶಾಲ ಹೃದಯಿಗಳು ನಾವು
ಆದರಿಸುವೆವು ಎಲ್ಲರನು
ಸ್ನೇಹಮಯಿಗಳು ನಾವು
ಸಹಿಸುವೆವು ಎಲ್ಲವನು
ಹೆತ್ತ ತಾಯಿ ನೀಡಿದ ಉಸಿರು ಕನ್ನಡ
ರಕ್ಷಿಸು, ಹೊತ್ತ ತಾಯಿಯ ಕಸ್ತೂರಿ ಕನ್ನಡ
ಕಲಿತ ಬಾಷೆ ಕಡೆಗಣಿಸದಿರಿ
ಕನ್ನಡ ಬಾಷೆ ಎಂದು ಮರೆಯದಿರಿ
ಹಳ್ಳಿ, ಹಳ್ಳಿಯ ಉಡುಗೊರೆ ಈ ಕನ್ನಡ
ಗಲ್ಲಿ, ಗಲ್ಲಿಯಲ್ಲೂ ಬೆಳಗಲಿ ನಮ್ಮ ಕನ್ನಡ ...೨

                                                                       -
ಶೂಜ್ಞ

No comments:

Post a Comment