. ಲೋಕನಿಂದಿತರು ....!
ಚಿಂದಿ ಆಯುತಿವೆ ಪುಟ್ಟ ಕೈಗಳು
ಸುಖಿಜೀವಿಗಳ ಕಸಕಾಗದಗಳು
ಬೆನ್ನಜೋಲಿಗೆಯಲ್ಲಿ ಅನ್ನದಾಸೆಯ ಮೂಟೆಗಳು
ಕಣ್ತುಂಬ ಬಣ್ಣಬಣ್ಣದ ಕನಸುಗಳು
ಹುಳುಹೊತ್ತರಿದಚ್ಚಿದ ಮೈಬಟ್ಟೆಗಳು
ಹೇನುಜಡೆಗಟ್ಟಿದ ಕೂದಲುಗಳು
ತಾನೇಕೆಲ್ಲಿರುವೆ ತನ್ನವರ್ಯಾರು
ಅರಿಯದೆ ಕಂಬನಿ ಸುರಿಸುತಿರಲು
ಜಾಣಮರೆವಿನ ಜಗದೊಡೆಯ
ಕಾಲಚಕ್ರದ ನಿಯಮದಲಿರಲು
ಅರಿತವರು, ಅರಿಯದವರ
ಕ್ಷಣದ ಕರುಣೆಗೆ
ಲೋಕನಿಂದಿತರಾದವರು ....!
ನಿಜಲೋಕಪಾಲಕರಿವರು
ದಿನದಸಿವಿನ ಕಾಯಕದವರು
ಅತಿಆಸೆಯಿಲ್ಲದವರು
ಧರ್ಮ,ಜಾತಿ, ಮತವಿಲ್ಲದವರು
ಸಂಸ್ಕೃತಿ, ಸಂಪ್ರದಾಯಗಳಿಗೆ ಮಿಗಿಲಾದವರು
ವಿದ್ಯೆ, ಮಿಥ್ಯೆ ಕಲಿಯದವರು
ರೋಗದ ಹೆಮ್ಮಾರಿಗೆ ಮೊದಲು ಬಲಿಯಾಗುವರು
ಹಣೆಪಟ್ಟಿ ಹಚ್ಚಿಕೊಂಡ ಆನಾಥರಿವರು......!
ಸುಖಿಜೀವಿಗಳ ಕಸಕಾಗದಗಳು
ಬೆನ್ನಜೋಲಿಗೆಯಲ್ಲಿ ಅನ್ನದಾಸೆಯ ಮೂಟೆಗಳು
ಕಣ್ತುಂಬ ಬಣ್ಣಬಣ್ಣದ ಕನಸುಗಳು
ಹುಳುಹೊತ್ತರಿದಚ್ಚಿದ ಮೈಬಟ್ಟೆಗಳು
ಹೇನುಜಡೆಗಟ್ಟಿದ ಕೂದಲುಗಳು
ತಾನೇಕೆಲ್ಲಿರುವೆ ತನ್ನವರ್ಯಾರು
ಅರಿಯದೆ ಕಂಬನಿ ಸುರಿಸುತಿರಲು
ಜಾಣಮರೆವಿನ ಜಗದೊಡೆಯ
ಕಾಲಚಕ್ರದ ನಿಯಮದಲಿರಲು
ಅರಿತವರು, ಅರಿಯದವರ
ಕ್ಷಣದ ಕರುಣೆಗೆ
ಲೋಕನಿಂದಿತರಾದವರು ....!
ನಿಜಲೋಕಪಾಲಕರಿವರು
ದಿನದಸಿವಿನ ಕಾಯಕದವರು
ಅತಿಆಸೆಯಿಲ್ಲದವರು
ಧರ್ಮ,ಜಾತಿ, ಮತವಿಲ್ಲದವರು
ಸಂಸ್ಕೃತಿ, ಸಂಪ್ರದಾಯಗಳಿಗೆ ಮಿಗಿಲಾದವರು
ವಿದ್ಯೆ, ಮಿಥ್ಯೆ ಕಲಿಯದವರು
ರೋಗದ ಹೆಮ್ಮಾರಿಗೆ ಮೊದಲು ಬಲಿಯಾಗುವರು
ಹಣೆಪಟ್ಟಿ ಹಚ್ಚಿಕೊಂಡ ಆನಾಥರಿವರು......!
- ಶೂಜ್ಞ
No comments:
Post a Comment