--ಕೊನೆ--!?
ಜೀವ, ಜಿಗುಪ್ಸೆ , ಜೀವನ ,
ಇದರೊಂದಿಗೆ ಬದುಕಿನ
ವಿಚಿತ್ರ ಪಯಣ
ಅಲ್ಲಲ್ಲಿ ಸಿಗುವ
ತಿರುವಿನ ತ್ರಾಸುಗಳೇ
ಜೀವನದ ಚರಣ.....
ಕ್ಷಣ ಕಂಡು,
ಕ್ಷಣದಲ್ಲಿ ಮಾಯವಾಗುವ
'ಅದ್ಬುತ ಸಂತೋಷವೇ'
ಜೀವದ ಜೀವಂತಿಕೆ ......
ಬಂದಿದ್ದು ಗೊತ್ತಿಲ್ಲ
ಹೋಗೋದು ಗೊತ್ತಿಲ್ಲ
ಸಾಗಲಿ ಜೀವನ
ಸಾಗರದ ಪಯಣ
ಸಾಕ್ಷಿಯಾಗಲಿ ಮರಣ....
ನೀ ಇರೆ ಎಲ್ಲಾ
ನೀ ಇಲ್ಲದಿರೆಯೂ ಎಲ್ಲಾ
ಇಲ್ಲ್ಯಾರೋ ಇಲ್ಲಾ!
ಇಲ್ಲದ ಇರುವಿಕೆಗೇಕೆ
ಇನ್ನಿಲ್ಲದ ತ್ರಾಸ
ಇರು ನೀ ಇದ್ದು ಇಲ್ಲದ
ಮನದಲಿ....
ಸಾಗಲಿ ಜೀವನ
ಜಾರಿ ಜಾರದ
ಜಾರೋ ಬಂಡಿಯಲಿ
ಆಟ ಆಡು !
ಭಯವ ಬಿಟ್ಟ
ಆಟದ ಬಂಡಿಯಲಿ....
- ಶೂಜ್ಞ
ಜೀವ, ಜಿಗುಪ್ಸೆ , ಜೀವನ ,
ಇದರೊಂದಿಗೆ ಬದುಕಿನ
ವಿಚಿತ್ರ ಪಯಣ
ಅಲ್ಲಲ್ಲಿ ಸಿಗುವ
ತಿರುವಿನ ತ್ರಾಸುಗಳೇ
ಜೀವನದ ಚರಣ.....
ಕ್ಷಣ ಕಂಡು,
ಕ್ಷಣದಲ್ಲಿ ಮಾಯವಾಗುವ
'ಅದ್ಬುತ ಸಂತೋಷವೇ'
ಜೀವದ ಜೀವಂತಿಕೆ ......
ಬಂದಿದ್ದು ಗೊತ್ತಿಲ್ಲ
ಹೋಗೋದು ಗೊತ್ತಿಲ್ಲ
ಸಾಗಲಿ ಜೀವನ
ಸಾಗರದ ಪಯಣ
ಸಾಕ್ಷಿಯಾಗಲಿ ಮರಣ....
ನೀ ಇರೆ ಎಲ್ಲಾ
ನೀ ಇಲ್ಲದಿರೆಯೂ ಎಲ್ಲಾ
ಇಲ್ಲ್ಯಾರೋ ಇಲ್ಲಾ!
ಇಲ್ಲದ ಇರುವಿಕೆಗೇಕೆ
ಇನ್ನಿಲ್ಲದ ತ್ರಾಸ
ಇರು ನೀ ಇದ್ದು ಇಲ್ಲದ
ಮನದಲಿ....
ಸಾಗಲಿ ಜೀವನ
ಜಾರಿ ಜಾರದ
ಜಾರೋ ಬಂಡಿಯಲಿ
ಆಟ ಆಡು !
ಭಯವ ಬಿಟ್ಟ
ಆಟದ ಬಂಡಿಯಲಿ....
- ಶೂಜ್ಞ
No comments:
Post a Comment