ಲತಾಗ್ನಿ!
ತಾಯಿಯ ಗರ್ಭದಲಿ
ಚಿಗುರೊಡೆಯಿತೊಂದು ಜೀವಾತ್ಮ
ಈ ಪಾಪಿ ಲೋಕದ
ಅರಿವಿಲ್ಲದೆ...
ಹಾಡುತಾ, ಕುಣಿಯುತಾ
ನೋಡುತಾ ನೋಡುತಾ
ಬೆಳೆಯಿತು ಆ ಗರ್ಭದಾತ್ಮ
ಕ್ರೂರ ವಿಧಿಯಾಟದ
ಅರಿವಿಲ್ಲದೆ...
ಹೂ ನಗುವಿನ, ಹೂಮನಸ
ಲತೆ! ಆಗಿ, ನೀ ಬಂದೆ ಓ ಮಗುವೇ !!
ನಿನ್ನ ಬುಡದ ಮುಳ್ಳುಗಳ
ಅರಿವಿಲ್ಲದೆ...
ಆಹಾ! ಎಂಥಾ ಸೌಂದರ್ಯ !!
ಎಷ್ಟು ವಿಸ್ಮಯ, ಈ ಜಗತ್ತು.
ಈ ಬಣ್ಣ ಬಣ್ಣದ ಮಾಯಾಲೋಕ
ಮರೆಮಾಚಿತು ಅದರ ನಿಜಲೋಕ
ಆದರೂ ಎಷ್ಟು ಸುಂದರ !
ಈ ಲೋಕ, ಎಂದನಿಸಿತು
ನಿನಗದರ ಮರ್ಮದ
ಅರಿವಿಲ್ಲದೆ...
ನೋಡಿದ್ದೆಲ್ಲಾ ಸುಂದರ
ಕೇಳಿದ್ದೆಲ್ಲಾ ಸತ್ಯ
ಇದೆಲ್ಲಾ ನಿತ್ಯ
ನಾಂದಿ ಹಾಡಿತು
ಆ ಕ್ರೂರ ವಿಧಿಯಾಟದ ಮಿಥ್ಯ
ಹೂಮನಸಾಯಿತು ಕಲ್ಲಿನ ಲತೆ
ಬಾಳೆಲ್ಲ ವ್ಯಥೆ ವ್ಯಥೆ...
ಮುಳ್ಳಾಯಿತು ನಿನ್ನ ಮೂಲ
ಮುಳ್ಳಿಂದ ಸಿಗುವುದೇ ಸಾರ
ಇನ್ನು ಬೆಳೆಯುವುದೆಲ್ಲಿ ಸಂಪೂರ
ಬಾಳಾಯಿತು ಭಾರ ಭಾರ...
ಆ ಸೃಷ್ಟಿಯ ವೈಷಿಷ್ಟವೇ
ನಿನ್ನಲ್ಲಿ ಕಂಡಂತೆ
ನೀನಾದೆ ಕಲ್ಲರಳಿ ಹೂವಾದಂತೆ !!
ಆ ಸೊಗಸು, ವಯಸು
ಕೀಚಕರಿಗೆ ಕಿಚ್ಚೊತ್ತಿಸಿತು...
ಸುಂದರ ಕನಸಿನ ಕನವರಿಕೆ
ನಿನ್ನ ಮನಸಿನ ಅಂಗಳದಲಿ
ಉಯ್ಯಾಲೆ ಆಡುವ ಸಮಯದಿ
ನೀ ಸಹಿಸಿದೆ,
ಈ ಪಾಪಿ ಲೋಕದ ಕಹಿ ಸ್ವಾರ್ಥವನ್ನ
ನೀ ದಹಿಸಿದ ಬಂಗಾರವಾದೆ
ಈ ಲೋಕ ಗೋಮುಕವ್ಯಾಘ್ರರ
ಬಲೆಯಿಂದ...
ನಿನ್ನ ರಕ್ಷಿಸಲಾರದಾಯಿತು
ನಿನ್ನಯ ಮೂಲ!
ನಂಬಲಾಗದಾಯಿತು
ಈ ಮಾಯಾಜಾಲ!!
ಮಾರ್ಗವಿಲ್ಲದಾಯಿತು
ನಿನ್ನ ಜೀವನ್ಮೂಲ !!
ಅಂತ್ಯವಿಲ್ಲದ ಹಾದಿಯಾಯಿತು
ನಿನ್ನ ಅಂತರಂಗದ ಜಾಲ !!!
ಆದರೂ, ನೀ ಜಯಿಸಿದೆ !
ಈ ಲೋಕದ ಮಾಯಾಜಾಲ
ಇದುವೇ ನಿನ್ನಯ
ಆತ್ಮವಿಶ್ವಾಸದ ಮೂಲ...
-ಶೂಜ್ಞ.
ತಾಯಿಯ ಗರ್ಭದಲಿ
ಚಿಗುರೊಡೆಯಿತೊಂದು ಜೀವಾತ್ಮ
ಈ ಪಾಪಿ ಲೋಕದ
ಅರಿವಿಲ್ಲದೆ...
ಹಾಡುತಾ, ಕುಣಿಯುತಾ
ನೋಡುತಾ ನೋಡುತಾ
ಬೆಳೆಯಿತು ಆ ಗರ್ಭದಾತ್ಮ
ಕ್ರೂರ ವಿಧಿಯಾಟದ
ಅರಿವಿಲ್ಲದೆ...
ಹೂ ನಗುವಿನ, ಹೂಮನಸ
ಲತೆ! ಆಗಿ, ನೀ ಬಂದೆ ಓ ಮಗುವೇ !!
ನಿನ್ನ ಬುಡದ ಮುಳ್ಳುಗಳ
ಅರಿವಿಲ್ಲದೆ...
ಆಹಾ! ಎಂಥಾ ಸೌಂದರ್ಯ !!
ಎಷ್ಟು ವಿಸ್ಮಯ, ಈ ಜಗತ್ತು.
ಈ ಬಣ್ಣ ಬಣ್ಣದ ಮಾಯಾಲೋಕ
ಮರೆಮಾಚಿತು ಅದರ ನಿಜಲೋಕ
ಆದರೂ ಎಷ್ಟು ಸುಂದರ !
ಈ ಲೋಕ, ಎಂದನಿಸಿತು
ನಿನಗದರ ಮರ್ಮದ
ಅರಿವಿಲ್ಲದೆ...
ನೋಡಿದ್ದೆಲ್ಲಾ ಸುಂದರ
ಕೇಳಿದ್ದೆಲ್ಲಾ ಸತ್ಯ
ಇದೆಲ್ಲಾ ನಿತ್ಯ
ನಾಂದಿ ಹಾಡಿತು
ಆ ಕ್ರೂರ ವಿಧಿಯಾಟದ ಮಿಥ್ಯ
ಹೂಮನಸಾಯಿತು ಕಲ್ಲಿನ ಲತೆ
ಬಾಳೆಲ್ಲ ವ್ಯಥೆ ವ್ಯಥೆ...
ಮುಳ್ಳಾಯಿತು ನಿನ್ನ ಮೂಲ
ಮುಳ್ಳಿಂದ ಸಿಗುವುದೇ ಸಾರ
ಇನ್ನು ಬೆಳೆಯುವುದೆಲ್ಲಿ ಸಂಪೂರ
ಬಾಳಾಯಿತು ಭಾರ ಭಾರ...
ಆ ಸೃಷ್ಟಿಯ ವೈಷಿಷ್ಟವೇ
ನಿನ್ನಲ್ಲಿ ಕಂಡಂತೆ
ನೀನಾದೆ ಕಲ್ಲರಳಿ ಹೂವಾದಂತೆ !!
ಆ ಸೊಗಸು, ವಯಸು
ಕೀಚಕರಿಗೆ ಕಿಚ್ಚೊತ್ತಿಸಿತು...
ಸುಂದರ ಕನಸಿನ ಕನವರಿಕೆ
ನಿನ್ನ ಮನಸಿನ ಅಂಗಳದಲಿ
ಉಯ್ಯಾಲೆ ಆಡುವ ಸಮಯದಿ
ನೀ ಸಹಿಸಿದೆ,
ಈ ಪಾಪಿ ಲೋಕದ ಕಹಿ ಸ್ವಾರ್ಥವನ್ನ
ನೀ ದಹಿಸಿದ ಬಂಗಾರವಾದೆ
ಈ ಲೋಕ ಗೋಮುಕವ್ಯಾಘ್ರರ
ಬಲೆಯಿಂದ...
ನಿನ್ನ ರಕ್ಷಿಸಲಾರದಾಯಿತು
ನಿನ್ನಯ ಮೂಲ!
ನಂಬಲಾಗದಾಯಿತು
ಈ ಮಾಯಾಜಾಲ!!
ಮಾರ್ಗವಿಲ್ಲದಾಯಿತು
ನಿನ್ನ ಜೀವನ್ಮೂಲ !!
ಅಂತ್ಯವಿಲ್ಲದ ಹಾದಿಯಾಯಿತು
ನಿನ್ನ ಅಂತರಂಗದ ಜಾಲ !!!
ಆದರೂ, ನೀ ಜಯಿಸಿದೆ !
ಈ ಲೋಕದ ಮಾಯಾಜಾಲ
ಇದುವೇ ನಿನ್ನಯ
ಆತ್ಮವಿಶ್ವಾಸದ ಮೂಲ...
-ಶೂಜ್ಞ.
No comments:
Post a Comment