^^* ಓ ದಿಗಾಂಬರಿಯೇ *^^
ಎದೆ ಜಲ್ಲನ್ನೆದೆ
ಓ ಜಲದೆನ್ನೇ
ಆ ರೂಪದಪುರೂಪ
ಈ ಕಣ್ಣ ತಣಿಸಲು
ಉಸಿರೇ ಮರತೆ ನಾ
ನಿನ್ನ ಮೈಯ ಇಳಿಜಾರು
ತಿರವು ನನ್ನ ಮೈಮರೆಸಲು
ಕನ್ಮರೆತವು ರೆಪ್ಪೆಯ ಬಡಿಯಲು
ಉಬ್ಬುತಗ್ಗುಗಳು ಉಬ್ಬೆರಿಸಿದವು,
ಆ ಸ್ವರ್ಗವೇ ಕಾಣುತಿರಲು
ಆ ನೀಲರಾಶಿಯ ಅಂದಕೆ
ಕಾಣದಾಯಿತು ಕಣ್ಣು
ನಿನ ಘಲ್, ಘಲ್ ನಡೆಯು
ಸಾಕಾಯಿತು ಈ ಹೃದಯ
ಕಳೆದು ಹೋಗಲು.....
ಓ ದಿಗಾಂಬರಿಯೇ
ಈ ಚೆಲುವ ನೋಡಲು
ಸೂರ್ಯಚಂದ್ರರು
ಪೈಪೋಟಿಯಲಿ ಬರಲು
ಓ ಶ್ವೇತಾಂಬರಿಯೇ
ನಿನ ಗಳಗಳ ನಗುವಿಗೆ
ಅಷ್ಟದಿಕ್ಕುಗಳು ಸಂಗೀತವಾದವು
ಆಳದ ಕಂದರಕ್ಕೆ ದುಮ್ಮಿಕ್ಕುವ
ನಿನ್ನ ರಭಸಕ್ಕೆ, ಚರಣದಿ ನಾ
ಮುಳುಗುಹೊದೆ ನಿನ್ನಂದದಲಿ
ಈ ಜೀವವು ಸೇರಲಿ ನಿನ್ನದೆಯ
ಜಲಪಾತದಲಿ, ಹರಿಯುವೆ ನಿನ
ಹೃದಯದ ರಕ್ಷಣೆಯಲಿ
ಓ ನಿಸರ್ಗ ದೇವಿಯೇ
ನಿನ ಚೆಲುವು, ಕಣ್ಣ ಒಲವು
ಓ ರಮಣೀಯ ಜಲಪಾತವೆ
ನಿನ ನೋಡಲು ಬರುವೆ
ಜನ್ಮಜನ್ಮದಲ್ಲೂ, ಸೇರಿಸಿಕೊ
ಈ ಪಾಪಿಯ, ನಿನ ಓಡಿಳಲಿ.....
- ಶೂಜ್ಞ
ಎದೆ ಜಲ್ಲನ್ನೆದೆ
ಓ ಜಲದೆನ್ನೇ
ಆ ರೂಪದಪುರೂಪ
ಈ ಕಣ್ಣ ತಣಿಸಲು
ಉಸಿರೇ ಮರತೆ ನಾ
ನಿನ್ನ ಮೈಯ ಇಳಿಜಾರು
ತಿರವು ನನ್ನ ಮೈಮರೆಸಲು
ಕನ್ಮರೆತವು ರೆಪ್ಪೆಯ ಬಡಿಯಲು
ಉಬ್ಬುತಗ್ಗುಗಳು ಉಬ್ಬೆರಿಸಿದವು,
ಆ ಸ್ವರ್ಗವೇ ಕಾಣುತಿರಲು
ಆ ನೀಲರಾಶಿಯ ಅಂದಕೆ
ಕಾಣದಾಯಿತು ಕಣ್ಣು
ನಿನ ಘಲ್, ಘಲ್ ನಡೆಯು
ಸಾಕಾಯಿತು ಈ ಹೃದಯ
ಕಳೆದು ಹೋಗಲು.....
ಓ ದಿಗಾಂಬರಿಯೇ
ಈ ಚೆಲುವ ನೋಡಲು
ಸೂರ್ಯಚಂದ್ರರು
ಪೈಪೋಟಿಯಲಿ ಬರಲು
ಓ ಶ್ವೇತಾಂಬರಿಯೇ
ನಿನ ಗಳಗಳ ನಗುವಿಗೆ
ಅಷ್ಟದಿಕ್ಕುಗಳು ಸಂಗೀತವಾದವು
ಆಳದ ಕಂದರಕ್ಕೆ ದುಮ್ಮಿಕ್ಕುವ
ನಿನ್ನ ರಭಸಕ್ಕೆ, ಚರಣದಿ ನಾ
ಮುಳುಗುಹೊದೆ ನಿನ್ನಂದದಲಿ
ಈ ಜೀವವು ಸೇರಲಿ ನಿನ್ನದೆಯ
ಜಲಪಾತದಲಿ, ಹರಿಯುವೆ ನಿನ
ಹೃದಯದ ರಕ್ಷಣೆಯಲಿ
ಓ ನಿಸರ್ಗ ದೇವಿಯೇ
ನಿನ ಚೆಲುವು, ಕಣ್ಣ ಒಲವು
ಓ ರಮಣೀಯ ಜಲಪಾತವೆ
ನಿನ ನೋಡಲು ಬರುವೆ
ಜನ್ಮಜನ್ಮದಲ್ಲೂ, ಸೇರಿಸಿಕೊ
ಈ ಪಾಪಿಯ, ನಿನ ಓಡಿಳಲಿ.....
- ಶೂಜ್ಞ
No comments:
Post a Comment