Sunday, 31 March 2013

^^ ಅರೆರೆ ಸುಳ್ಳು! 100%


 ^^ ಅರೆರೆ ಸುಳ್ಳು! 100%

ಅರೆರೆ ಸುಳ್ಳು!
ಸುಳ್ಳೆಂದರೆ ಸುಳ್ಳೇ!!
ಅಲ್ಲಿ ಹಂದಿಯ ದಂಡು
ಕೆಸರಲಿ ಮುಳುಗಿ
ಹೇಸಿಗೆ ತಿನ್ನುತ
ನಾ ಸ್ವಚ್ಛ, ನಾ ಸ್ವಚ್ಛ !
ಕಿರುಚುತ್ತ, ಅರುಚುತ್ತ
ಅಲ್ಲಿಂದ ಬರದೆ
ನಾ ಸ್ವಚ್ಛ , ನಾ ಸ್ವಚ್ಛ
ಎಂದು ಮೂತಿಯ ನೆಕ್ಕುತಾ
ಹೂಂಕರಿಸಿವೆ. ಕಂಡ ಜನರ
ಮುಂದೆ, ಒಂದುಕ್ಕೊಂದು
ಕೆಸರ ಬಳಿದುಕೊಂಡು
ನಾ ಸ್ವಚ್ಛ, ಇವನು ತುಚ್ಹ
ಅವನು ಕಚ್ಚಾ, ಇವನು ವಚ್ಚ
ಒಂದರ ಮೇಲೆ ಒಂದು
ಮೇಲೇರಲು, ಕಂಡಿದ್ದು ಒಂದೇ ಬಣ್ಣ !
ಇದ ನೋಡಿ ಹುಚ್ಹ
ಅರೆರೆ ಇದು ಸುಳ್ಳು
ಸುಳ್ಳೆಂದರೆ ಸುಳ್ಳೇ
ಆ ಜನರಲ್ಲೇ ಇದ್ದ ಹುಚ್ಹ
ತಲೆಕೆಟ್ಟು ಅರಚಿದ
ಒದ್ದೋಡಿಸಿ ಈ ಕಚ್ಚೆ, ಖಾದಿ ಅಚ್ಚಿದ
ಕೆಸರು ರಚ್ಚೆಗಳ
ನಾಡಿಗೆ ಹಿಡಿದ ಶನಿಗಳ
ಎಲ್ಲರಂದರು !?
ಅವನು ಹುಚ್ಹ, ಹುಚ್ಹ
ಮನದಲಿ ಕಚ್ಚಿತು
ಅವನು ನಿಜ , ಅವನೇ ನಿಜ !
ಹುಚ್ಚನಲ್ಲದೆ ಬೇರ್ಯಾರು
ನಿಜ ಹೇಳಬಲ್ಲರು !?

                                                          -
ಶೂಜ್ಞ

No comments:

Post a Comment