Sunday, 31 March 2013

" ಜೀವದ ಗೆಳತಿ" **


     " ಜೀವದ ಗೆಳತಿ" **

ಹನಿ ಹನಿ ಮಳೆಯಲಿ 
ಅನಂತ ಹನಿಗಳ ಜೊತೆಯಲಿ 
ನೀನು ನನಗಾಗಿ ಬರುವೆಯಾ 
ಓ ನನ್ನ ಗೆಳತಿ ! ....

ಅನಂತ ಮಳೆ ಹನಿಗಳ ಮದ್ಯೆ 
ಒಂದು ಹನಿ 'ಮುತ್ತು' ಆದಂತೆ 
ನೀನು ನನ್ನ ಅಂತರಾತ್ಮದ 
ಮುತ್ತಾಗುವೆಯಾ 
ಓ ನನ್ನ ಗೆಳೆತಿ ! ....

ನನ್ನೆದೆಯ ಅಂತರಾತ್ಮದಲಿ 
ನಿನ್ನ ಗೆಳೆತನದ ಸಂಚಲನ 
ನನ್ನ ಮನಸಿಗಾಗಿದೆ 
ಕ್ಷಣ , ಕ್ಷಣ 
ಅಮೃತ ಸಿಂಚನ ! 
ಈ ಕ್ಷಣ ಕೊನೆವರೆಗೂ 
ನೀಡುವೆಯಾ 
ಓ ನನ್ನ ಗೆಳೆತಿ !...

ಅನಂತ ಭಾವನೆಗಳ ಮದ್ಯೆ 
ನಿತ್ಯ ಚಿರಂತನ 
ನಮ್ಮ ಗೆಳೆತನ 
ನನ್ನ ಜೀವದ ಗೆಳೆತಿ ನೀನಾಗಲಾರೆಯಾ 
ಓ ನನ್ನ ಗೆಳೆತಿ ! ....

ನಿನಗಾಗಿ ಆ ಕಾಲವನ್ನೇ ಕಾಯುವೆ 
ನಿನ್ನ ಸ್ನೇಹದ ಸಿಹಿ ನೆನಪಲಿ 
ಈ ಪಾಪಿ ಲೋಕದ 
ನೋವು ಮರೆಯುವೆ 
ಈ ಜೀವದ ಅಂಚಿನವರೆಗೂ 
ನೀ ಜೋತೆಯಾಗುವೆಯಾ 
ಓ ನನ್ನ ಗೆಳೆತಿ ! ....


                                                           - ಶೂಜ್ಞ

No comments:

Post a Comment