Sunday, 31 March 2013

*** ದಿಕ್ಕಿಲ್ಲದ ಹೂಗಳು ***


         *** ದಿಕ್ಕಿಲ್ಲದ ಹೂಗಳು ***

ಮೈಸಿರಿಯ ಮರೆಮಾಚುತ ತಗುಡು ಸಂದುಗಳ ಮರೆಯಲಿ 
ಸ್ವಾಭಿಮಾನವ ಕಣ್ಣ ಭಯದಲಿ ಸೂಸುತ ಸುತ್ತಲು ನಾಗರಿಕ 
ಕಪ್ಪು ಗಣ್ಯರ ಕನ್ತಪ್ಪಿಸಲಾಗದೆ ಮೈಯ ಕಪ್ಪು ಕೊಳೆಯ 
ತೊಳೆಯಲು ತರುಣಿ, ದುರು ದುರನೆ ನೆಟ್ಟ ನೋಟದಿ 
ಕಣ್ಣಲೆ ಅಭಲೆಯ ತಿಂದು ಮುಗಿಸಿ ಮೀಸೆಯಡಿಯಲಿ 
ಮುಸಿನಗುತ ಮರೆತರು, ಇದು ನನ್ನ ತಾಯಿ ಭಾರತಿ ಎಂದು !??

ದಿಕ್ಕಿಲ್ಲದ ರಸ್ತೆಯಕ್ಕಲದ ಹೂಗಳು ಜಗವ ದಿಕ್ಕರಿಸಲಾಗದೆ
ಕಂಡ ಕಂಡ ಹಿಂಸ ಮೃಗಗಳ ಕಾಲಡಿಯಲಿ ನಲುಗುತಿರಲು
ಗಣ್ಯರ ಭಾಷಣ, ಘೋಷಣ, ಆಸ್ವಾಷಣೆ, ಮುಗಿಲು ಮುಟ್ಟುತಿರಲು
ಮರೆಯಲಿ ಹೂಗಳ ಬೇಟೆಯಾಡುತ ಹಿತವನ್ಚಕರಾದರು...!??

                                                                                    -
ಶೂಜ್ಞ

No comments:

Post a Comment