"ನಾನ್ಹೇಗೆ ಮರೆಯಲಿ ನಿನ್ನ, ನೀ ಮತ್ತೆ ಬರಬೇಡ ಚಿನ್ನ"!
ಆ ನಿನ್ನ ಕಣ್ಣ ಕಾಂತಿ,
ನನ್ನ ಮನದಲಿ
ಪ್ರೇಮ ಬೀಜವ ಬಿತ್ತಿ.
ಮೊಳಕೆಯೊಡೆಯಿತು,
ಹಸಿರ ಹೊತ್ತು.
ಬೆಳೆಯುತಲಿತ್ತು ,
ಪ್ರೇಮವ ಹೊತ್ತು.
ಕೊಯ್ಲಿಗೆ ಮುಂಚೆ ಬಂತು,
ಪ್ರೇಮಕೆ ಕುತ್ತು.
ಆ ವಿಧಿ ಬೀಸಿದ
ಕೊಡಲಿ ಪೆಟ್ಟಿಗೆ
ಸಿಕ್ಕಿತು, ನನ್ನ ಪ್ರೇಮದ
ಪ್ರಥಮ "ಮುತ್ತು"...!
ನಾನ್ಹೇಗೆ ಮರೆಯಲಿ ನಿನ್ನ?
ನೀ ಮತ್ತೆ ಬರಬೇಡ ಚಿನ್ನ!!
ಇದು ಮನಸಿನ ಹೊಂಬಣ್ಣ ,
ಆ ಕಾಮನಬಿಲ್ಲಿನ ನಿಜಬಣ್ಣವಲ್ಲಣ್ಣ.
ಓಮ್ಮೆ, ನೀ ಬಂದರೆ,
ಬಯಲಾಗುವುದು
ಅದರ ನಿಜಬಣ್ಣ.
ನಾ ಮರೆಯಲಾರೆ,
ಆ ನಿನ್ನ ಕಾಮನಬಿಲ್ಲಿನ ಮನ.
ನೀ ಮತ್ತೇ ಬರಬೇಡ ಚಿನ್ನ,
ನನ್ನೀ ಜನ್ಮಕ್ಕೆ ಸಾಕು
ನಿನ್ನ ಮಧುರ ನೆನಪಿನ ಬಣ್ಣ.
- ಶೂಜ್ಞ
ಆ ನಿನ್ನ ಕಣ್ಣ ಕಾಂತಿ,
ನನ್ನ ಮನದಲಿ
ಪ್ರೇಮ ಬೀಜವ ಬಿತ್ತಿ.
ಮೊಳಕೆಯೊಡೆಯಿತು,
ಹಸಿರ ಹೊತ್ತು.
ಬೆಳೆಯುತಲಿತ್ತು ,
ಪ್ರೇಮವ ಹೊತ್ತು.
ಕೊಯ್ಲಿಗೆ ಮುಂಚೆ ಬಂತು,
ಪ್ರೇಮಕೆ ಕುತ್ತು.
ಆ ವಿಧಿ ಬೀಸಿದ
ಕೊಡಲಿ ಪೆಟ್ಟಿಗೆ
ಸಿಕ್ಕಿತು, ನನ್ನ ಪ್ರೇಮದ
ಪ್ರಥಮ "ಮುತ್ತು"...!
ನಾನ್ಹೇಗೆ ಮರೆಯಲಿ ನಿನ್ನ?
ನೀ ಮತ್ತೆ ಬರಬೇಡ ಚಿನ್ನ!!
ಇದು ಮನಸಿನ ಹೊಂಬಣ್ಣ ,
ಆ ಕಾಮನಬಿಲ್ಲಿನ ನಿಜಬಣ್ಣವಲ್ಲಣ್ಣ.
ಓಮ್ಮೆ, ನೀ ಬಂದರೆ,
ಬಯಲಾಗುವುದು
ಅದರ ನಿಜಬಣ್ಣ.
ನಾ ಮರೆಯಲಾರೆ,
ಆ ನಿನ್ನ ಕಾಮನಬಿಲ್ಲಿನ ಮನ.
ನೀ ಮತ್ತೇ ಬರಬೇಡ ಚಿನ್ನ,
ನನ್ನೀ ಜನ್ಮಕ್ಕೆ ಸಾಕು
ನಿನ್ನ ಮಧುರ ನೆನಪಿನ ಬಣ್ಣ.
- ಶೂಜ್ಞ
No comments:
Post a Comment