*ಜೀವದೊಳಗಿಲ್ಲ ನಾವು*
ಸಾವಿನೊಳಗಿಲ್ಲ ನೋವು
ಜೀವದೊಳಗಿಲ್ಲ ನಾವು
ಆಳತೆ ಮೀರಿದ ಗಾಳಿಗೆ
ಆರಿದೆ ಹಣತೆ
ಎಣ್ಣೆ ಇದ್ದರೇನು !?
ಬತ್ತಿ ಇದ್ದರೇನು !?
ದೀಪವ ಹಚ್ಚಲು
ಅವನು ಮತ್ತೆ ಬರುವನೆನು !?
ಆರದೆ ಇರಲು, ಈ ಜೀವ
ನಂದಾ ದೀಪವೇನು !?
ಇದ್ದಿದ್ದು ನಿನಲ್ಲ ಹೋಗಿದ್ದು ನಿನಲ್ಲ
ಈ ಲೋಕದ ಕಷ್ಟ-ನಷ್ಟ
ಸುಖ-ಸಂತೋಷ,
ದುಃಖ-ದುಮ್ಮಾನದ
ಪ್ರತಿನಿಧಿ ಯಾರು !?
ಇದ್ದ ದೇಹಕ್ಕೆ ಸ್ಪರ್ಶವ ನೀಡಿ
ಕಾಲಚಕ್ರಕ್ಕೆ ಸಿಕ್ಕಿಸಿ
ಚೆಲ್ಲಾಟವಾಡಿ ರಸಹಿಂಡಿದವರ್ಯಾರು !?
ಜಡರೂಪಕ್ಕೆ ಜೀವಕೊಟ್ಟು
ಜಾತ್ರೆ ನಡೆಸುವ ನಿನ್ಯಾರು !?
- ಶೂಜ್ಞ
ಜೀವದೊಳಗಿಲ್ಲ ನಾವು
ಆಳತೆ ಮೀರಿದ ಗಾಳಿಗೆ
ಆರಿದೆ ಹಣತೆ
ಎಣ್ಣೆ ಇದ್ದರೇನು !?
ಬತ್ತಿ ಇದ್ದರೇನು !?
ದೀಪವ ಹಚ್ಚಲು
ಅವನು ಮತ್ತೆ ಬರುವನೆನು !?
ಆರದೆ ಇರಲು, ಈ ಜೀವ
ನಂದಾ ದೀಪವೇನು !?
ಇದ್ದಿದ್ದು ನಿನಲ್ಲ ಹೋಗಿದ್ದು ನಿನಲ್ಲ
ಈ ಲೋಕದ ಕಷ್ಟ-ನಷ್ಟ
ಸುಖ-ಸಂತೋಷ,
ದುಃಖ-ದುಮ್ಮಾನದ
ಪ್ರತಿನಿಧಿ ಯಾರು !?
ಇದ್ದ ದೇಹಕ್ಕೆ ಸ್ಪರ್ಶವ ನೀಡಿ
ಕಾಲಚಕ್ರಕ್ಕೆ ಸಿಕ್ಕಿಸಿ
ಚೆಲ್ಲಾಟವಾಡಿ ರಸಹಿಂಡಿದವರ್ಯಾರು !?
ಜಡರೂಪಕ್ಕೆ ಜೀವಕೊಟ್ಟು
ಜಾತ್ರೆ ನಡೆಸುವ ನಿನ್ಯಾರು !?
- ಶೂಜ್ಞ
No comments:
Post a Comment