Sunday, 31 March 2013

ಆತ್ಮವೇ ಎಲ್ಲವ ಆವರಿಸಿ ಅವತರಿಸಿದೆ ಇಂದು !!


. ಆತ್ಮವೇ ಎಲ್ಲವ ಆವರಿಸಿ ಅವತರಿಸಿದೆ ಇಂದು !!

ಕಂಗಳು ಮುಚ್ಚಿವೆ ತನಗೆ ಕಾಣುವುದೇ ಬೇಡವೆಂದು
ಕಿವಿಗಳು ಕೇಳಿವೆ ತನೆಗೆ ಕೇಳಿಸುವುದು ಬೇಡವೆಂದು
ಬಾಯಿಯು ಬೇಡಿತಿದೆ ಮಾತು ಬೇಡವೆಂದು
ಮನಸು ಕೊರಗುತಿದೆ ತನಗೆ ಮನಸು ಏಕಿದೆ ಎಂದು
ಜೀವವು ಚೀರುತಿದೆ ತನಗೆ ಈ ದೇಹವೇ ಬೇಡವೆಂದು
ಆತ್ಮವೇ ಎಲ್ಲವ ಆವರಿಸಿ ಅವತರಿಸಿದೆ ಇಂದು
ಎಲ್ಲ ಮರ್ಮಗಳು ಕರಗಿ ಬೇಡುತಿವೆ ನಮಗೇನು ಬೇಡವೆಂದು
ಆತ್ಮ ಭೋಧಿ ಭೋಧಿಸುತಿದೆ ಎಲ್ಲವು ನೀವೇ ಕಾಣುವಿರೆಂದು
ಅನಂತ ಭಾವನೆಗಳ ಅಲೆಗಳಿಗೆ ಕದಡಿದೆ ಮನಸಿನ ಮರ್ಮಗಳು ಇಂದು
ಮನಸಿನ ಅರೆಬಿದಿಗೆ ತುಂಬಿ ತುಣುಕಿದೆ  ಭೋದಿಯಾಗಿ ಬಂದು.

                                                                                                 -
ಶೂಜ್ಞ

No comments:

Post a Comment