^^^ ಸರಸರಸಿ ^^^ !!
ರೂಪದರಸಿ ಸರ ಸರಸರಸಿ
ಸರಿಗಮಪ ಶೃಂಗಾರ ಸುರಸಿ
ಕಣಕಣವು ಕೊಬ್ಬಿದರಸಿ !
ಮೈಯ ಸುಗುಮನೃತ್ಯ ಮೈಮರೆಸಿ
ಹರೆಯೆದೆಗೆ ಬಿಸಿಯುಸಿರು ತಾಕಿಸಿ
ಅರಸಿಕರ ರಸಜ್ವಾಲೆಯುರಿಸಿ
ಕಣ್ಣೋಟದಲೇ ವರುಣನ ವರಿಸಿ
ಭೂದೇವಿಯ ಋಣ ತೀರಿಸಿ !
ಈ ಹೃದಯ ಕಮಲ ಆರಳಿಸಿ
ಆ ಚಿತ್ತಾರಕೆ ಚಿತ್ತಾರವ ಹೊದಿಸಿ
ಮನಮನದಳು ಉತ್ಸಾಹ ಮೂಡಿಸಿ
ನಾಟ್ಯಕೆ ನಾಟ್ಯ ಕಲಿಸುವ
ಭರತನಾಟ್ಯ ಮಯೂರಿಯೇ
ಆ ನಟರಾಜ ನಿನಗೆ ಸಾಟಿಯೇ....!!!
- ಶೂಜ್ಞ
ರೂಪದರಸಿ ಸರ ಸರಸರಸಿ
ಸರಿಗಮಪ ಶೃಂಗಾರ ಸುರಸಿ
ಕಣಕಣವು ಕೊಬ್ಬಿದರಸಿ !
ಮೈಯ ಸುಗುಮನೃತ್ಯ ಮೈಮರೆಸಿ
ಹರೆಯೆದೆಗೆ ಬಿಸಿಯುಸಿರು ತಾಕಿಸಿ
ಅರಸಿಕರ ರಸಜ್ವಾಲೆಯುರಿಸಿ
ಕಣ್ಣೋಟದಲೇ ವರುಣನ ವರಿಸಿ
ಭೂದೇವಿಯ ಋಣ ತೀರಿಸಿ !
ಈ ಹೃದಯ ಕಮಲ ಆರಳಿಸಿ
ಆ ಚಿತ್ತಾರಕೆ ಚಿತ್ತಾರವ ಹೊದಿಸಿ
ಮನಮನದಳು ಉತ್ಸಾಹ ಮೂಡಿಸಿ
ನಾಟ್ಯಕೆ ನಾಟ್ಯ ಕಲಿಸುವ
ಭರತನಾಟ್ಯ ಮಯೂರಿಯೇ
ಆ ನಟರಾಜ ನಿನಗೆ ಸಾಟಿಯೇ....!!!
- ಶೂಜ್ಞ
No comments:
Post a Comment