** ಈ ಜೀವವೆತಕೋ ! ಈ ಭಾವವೆತಕೋ !!? **
ಈ ಜೀವವೆತಕೋ ಈ ಭಾವವೆತಕೋ
ನೀನಿಲ್ಲದ ಈ ಜಗವೆತಕೋ .....!
ನಿನ ನಗು ಕಾಣದ
ಈ ನೋಟವೆತಕೋ !?
ನಿನ ಗಳಗಳ ಮಾತು ಕೇಳದ
ಈ ಕಿವಿಗಳೆತಕೋ !?
ನಿನ ಸ್ಪರ್ಶ ಮಾಡದ
ಈ ಕೈಗಳತಕೋ !?
ನಿನ ಸನಿಹ ನಡೆಯದ
ಈ ಕಾಲ್ಗೆಳತಕೋ !?
ನಿನ ಉಸಿರು ತಾಕದ
ಈ ಉಸಿರೆತಕೋ !?
ಈ ಜೀವವೆತಕೋ ಈ ಭಾವವೆತಕೋ
ನೀನಿಲ್ಲದ ಈ ಜಗವೆತಕೋ .....!
ಕಾಣದೆ ಹೋದೆ !!?
ಕಂಡ ಕನಸು ಆಳಿಸಿ ಹೋದೆ
ಈ ಕಲ್ಲ ಮನಸು ಕರಗಿ ಕನ್ನಿರಾಗಿದೆ
ಕರುಣಾದೇವಿಯೇ ಕರುಣಿಸಿ
ಈ ಕನ್ನಿರರೋಸಲು ಬಾರೆಯಾ
ಈ ಜೀವವೆತಕೋ ಈ ಭಾವವೆತಕೋ
ನೀನಿಲ್ಲದ ಈ ಜಗವೆತಕೋ .....!
ಕಣ್ಣು ಕುರಡಾಗುತಿದೆ
ನಿನ ಮುಗ್ಧ ಮುಖವ ಕಾಣದೆ !
ದೇಹ ಕೊಳೆಯುತಿದೆ
ನಿನ ಸ್ಪರ್ಶ ಕಾಣದೆ !
ಮನ ಮರಗಟ್ಟಿದೆ
ನಿನ ಮಾತು ಕೇಳಿಸದೆ !
ಹೃದಯ ಹುಡುಕುತಿದೆ
ನಿನ ಬಿಸಿಯುಸಿರ
ಕೊನೆ ಆಸೆಯಲಿ !!
ಈ ಜೀವವೆತಕೋ ಈ ಭಾವವೆತಕೋ
ನೀನಿಲ್ಲದ ಈ ಜಗವೆತಕೋ .....!
- ಶೂಜ್ಞ
No comments:
Post a Comment