@ ಹದಿನಾರರಲ್ಲೇ ನಿಂತ ವಯಸ್ಸು..!?
ಜೀವನ ನಿಂತಲ್ಲೆ ನಿಂತಿದೆ ಮುಂದಕ್ಕೆ ಸಾಗದೆ !?
ಇದು ಹದಿನಾರರಲ್ಲೇ ನಿಂತ ವಯಸ್ಸು, ಕನಸು
ನಿತ್ಯ ಕಾಮ, ನಿತ್ಯ ಮೋಸ, ನಿತ್ಯ ಬದುಕು
ಬಿಟ್ಟು ಬೇರೇನೂ ಕಲಸಿಲಿಲ್ಲ ನಿನ್ನ ಮನಸ್ಸಿಗೆ, ದೇಹಕ್ಕೆ
ಹದಿನರಾರಾಚೆ ನಿನ್ನಿಂದ ಬೇರೇನೂ ಕಲಿಯಲಾಗಲಿಲ್ಲ
ಈ ದೇಹಕ್ಕೆ ಸುಖ ನೀಡುವುದ ಬಿಟ್ಟು ....
ಜೀವನವೆಂದರೆ ಇಷ್ಟೇನಾ ...!!?
ಪ್ರೀತಿ, ಸ್ನೇಹ, ಮಕ್ಕಳು, ಮಡದಿ !
ಇವುಗಳ ಬಿಟ್ಟು ಇನ್ನೇನಿದೆ ನಿನ್ನ ಮನದಲಿ
ಇವುಗಳ ಮದ್ಯೆ 'ನೀನು' ಎಂಬುವನೆಲ್ಲಿ !?
ನಿನ್ನ ನೀನೆ ಮರೆತೆಯಾ ಹದಿನಾರರಲ್ಲೇ !
ಕಲಿಯಲು ಇರುವುದು ನೂರು
ಕಲಿತಿದ್ದು ಹದಿನಾರು
ಬಂಧ, ಸಂಬಂಧಗಳ ಜೇಡರಬಲೆಗೆ ಸಿಲುಕಿ
ಸೋತೆ ನೀ ಹದಿನಾರರಲ್ಲೇ ......
ಮಗುವಿನಂತೆ ಕಲಿತಿದ್ದು
ಮಗ್ಗುಲು ಬದಲಿಸುವವರೆಗೆ
ಮಸ್ತಿಯೇರಿದ ಮೇಲೆ ನೀ
ಕಲಿತಿದ್ದು ಬಿಸಿಮೈಯ ಹೇಳ್ದಂಗೆ
ನೀನಾದೆ ಪರಭಾರೆ
ನಿನ್ನಾಸೆಯು ಬರಿ ಸುಖದ ಗುಳ್ಳೆ
ನಿನ್ನ ಮೈಮನ ಸೇರಿತು
ಜೇಡರಬಲೆಯಾ ಸಂಚಿಗೆ
ಹೊದ್ದಾಡುತ್ತಿರುವೆ ಆ ಮತ್ತಿನಲ್ಲಿ ಗೊತ್ತಾಗದೆ ....
ಜೀವನವು ನದಿಯಂತೆ ಹರಿದು
ಪ್ರತಿಕ್ಷಣ ಕಲಿಕೆಯಲಿ ಜೀವಸಲಿ
ಮಾಯಾಲೋಕದ ಭ್ರಮೆಗಳ ಬಿಟ್ಟು
ಮನಸಿನಾಳದ ಮನಸ ಒಮ್ಮೆ ಕೇಳಿನೋಡಿ
ನಿಜಕಲಿಕೆ ಅಲ್ಲಿದೆ, ಅದು ಮಗುವಿನ ಕಲಿಕೆಯಂತೆ
ನಿಷ್ಕಲ್ಮಶ, ನಿಸ್ವಾರ್ಥ, ನಿರ್ಮಲ ಕಲಿಕೆ
ಕಲಿಕೆಯಲ್ಲಿದೆ ನಿಜ ಜೀವನ
- ಶೂಜ್ಞ
ಜೀವನ ನಿಂತಲ್ಲೆ ನಿಂತಿದೆ ಮುಂದಕ್ಕೆ ಸಾಗದೆ !?
ಇದು ಹದಿನಾರರಲ್ಲೇ ನಿಂತ ವಯಸ್ಸು, ಕನಸು
ನಿತ್ಯ ಕಾಮ, ನಿತ್ಯ ಮೋಸ, ನಿತ್ಯ ಬದುಕು
ಬಿಟ್ಟು ಬೇರೇನೂ ಕಲಸಿಲಿಲ್ಲ ನಿನ್ನ ಮನಸ್ಸಿಗೆ, ದೇಹಕ್ಕೆ
ಹದಿನರಾರಾಚೆ ನಿನ್ನಿಂದ ಬೇರೇನೂ ಕಲಿಯಲಾಗಲಿಲ್ಲ
ಈ ದೇಹಕ್ಕೆ ಸುಖ ನೀಡುವುದ ಬಿಟ್ಟು ....
ಜೀವನವೆಂದರೆ ಇಷ್ಟೇನಾ ...!!?
ಪ್ರೀತಿ, ಸ್ನೇಹ, ಮಕ್ಕಳು, ಮಡದಿ !
ಇವುಗಳ ಬಿಟ್ಟು ಇನ್ನೇನಿದೆ ನಿನ್ನ ಮನದಲಿ
ಇವುಗಳ ಮದ್ಯೆ 'ನೀನು' ಎಂಬುವನೆಲ್ಲಿ !?
ನಿನ್ನ ನೀನೆ ಮರೆತೆಯಾ ಹದಿನಾರರಲ್ಲೇ !
ಕಲಿಯಲು ಇರುವುದು ನೂರು
ಕಲಿತಿದ್ದು ಹದಿನಾರು
ಬಂಧ, ಸಂಬಂಧಗಳ ಜೇಡರಬಲೆಗೆ ಸಿಲುಕಿ
ಸೋತೆ ನೀ ಹದಿನಾರರಲ್ಲೇ ......
ಮಗುವಿನಂತೆ ಕಲಿತಿದ್ದು
ಮಗ್ಗುಲು ಬದಲಿಸುವವರೆಗೆ
ಮಸ್ತಿಯೇರಿದ ಮೇಲೆ ನೀ
ಕಲಿತಿದ್ದು ಬಿಸಿಮೈಯ ಹೇಳ್ದಂಗೆ
ನೀನಾದೆ ಪರಭಾರೆ
ನಿನ್ನಾಸೆಯು ಬರಿ ಸುಖದ ಗುಳ್ಳೆ
ನಿನ್ನ ಮೈಮನ ಸೇರಿತು
ಜೇಡರಬಲೆಯಾ ಸಂಚಿಗೆ
ಹೊದ್ದಾಡುತ್ತಿರುವೆ ಆ ಮತ್ತಿನಲ್ಲಿ ಗೊತ್ತಾಗದೆ ....
ಜೀವನವು ನದಿಯಂತೆ ಹರಿದು
ಪ್ರತಿಕ್ಷಣ ಕಲಿಕೆಯಲಿ ಜೀವಸಲಿ
ಮಾಯಾಲೋಕದ ಭ್ರಮೆಗಳ ಬಿಟ್ಟು
ಮನಸಿನಾಳದ ಮನಸ ಒಮ್ಮೆ ಕೇಳಿನೋಡಿ
ನಿಜಕಲಿಕೆ ಅಲ್ಲಿದೆ, ಅದು ಮಗುವಿನ ಕಲಿಕೆಯಂತೆ
ನಿಷ್ಕಲ್ಮಶ, ನಿಸ್ವಾರ್ಥ, ನಿರ್ಮಲ ಕಲಿಕೆ
ಕಲಿಕೆಯಲ್ಲಿದೆ ನಿಜ ಜೀವನ
- ಶೂಜ್ಞ
No comments:
Post a Comment