Sunday, 31 March 2013

@ ಮನವೇ ಗೊತ್ತೇ ನಿನ್ಯಾರೆಂದು !?


    @ ಮನವೇ ಗೊತ್ತೇ ನಿನ್ಯಾರೆಂದು !? 


ಮನವೇ ಗೊತ್ತೇ ನಿನ್ಯಾರೆಂದು !? 
ಅರಿತರು ನೀ ಕೋತಿಯೆಂದು
ನೀ ನಗುತಿಹೆ ನಾ ಜ್ಞಾನಿಯೆಂದು !
ಬಗೆ ಬಗೆಯ ರೀತಿ -ನೀತಿ ನಿಂದು 
ಇದು ಆ ಕೋತಿಯ ಚೇಷ್ಟೆಯೆಂದು 
ಪಾಪಿಗೇನು ಗೊತ್ತು !
ಅದು ನಿನ್ನದೇ ಆಟವೆಂದು
ನೀ ನಿನ್ನಲ್ಲೇ ನಗುತಿರುವೆ 
ನಾ ಮಹಾಜ್ಞಾನಿಯೆಂದು !.....

ನಿನ್ನ ರೂಪವ ನೋಡಲೆಂದು 
ಹತ್ತಿಹರು ಗಿರಿ ಕನಿಜಗಳೆಂದು
ಉರುಳಿಹರು ಕಲ್ಲು ಕಂಬಗಳೆಂದು
ನೀ ನಗುತಿಹೆ ನಾ ರೂಪಿಯಲ್ಲವೆಂದು !
ಈ ಪಾಪಿಕಪಿಗಳಿಗೆ ಹೊಳೆಯುವುದೆಂದೋ !?
ಆ ಮಾಣಿಕ್ಯದಂತ ಮನ 
ನಮ್ಮದೇ ನೆರಳೆಂದು !.....

                                                           -
ಶೂಜ್ಞ



No comments:

Post a Comment