Saturday, 4 May 2013






ಓಂಟಿ ನಾವಿಕಳು ..!

ಪ್ರೀತಿಯ ನಾವೆಯಲಿ
ಈ ಜೀವನದ ಕಡಲಿನಲಿ
ಸದ್ದಿಲ್ಲದೆ ನಡೆದಿತ್ತು
ಪ್ರೇಮದ ಪಯಣ !

ನಡು ಕಡಲಿನಲಿ
ಸಾವಿಗೆ ನೆಪವೇಳದೆ
ನೀ ಎದ್ದು ಹೋದೆ
ಈ ಓಂಟಿ ನಾವಿಕಳ ಬಿಟ್ಟು !

ಒಮ್ಮೆಲೇ ಬಂದಿದೆ
ಮನದ ಸುಖಸಾಗರದಲಿ
ಸುಳಿಗಾಳಿ ಮಳೆ !

ಹಗಲಿರಳು ಬೆನ್ನೆತ್ತಿದೆ
ನನದೆ ನೆರಳಂತೆ
ನಿನ ನೆನಪು !

ನಾ ಬೆಚ್ಚಿಬೀಳುವ ಪರಿಗೆ
ಕಣ್ಣಂಚಲ್ಲಿ ಕಾದು ಕುಳಿತಿದೆ
ಭಾವನೆಗಳ ಜಲಪಾತ !

ಹುಕ್ಕಿ ಹರಿಯುತ್ತಿದೆ
ದುಗುಡದ ಹಾದಿಯಲ್ಲಿ
ತಡೆಗೋಡೆಗಳ ಹಂಗಿಲ್ಲದೆ !

ನಾ ಕಾಣುತ್ತಿರುವೆ
ಈ ಜಗದ ಬೆತ್ತಲು
ದುಶ್ಯಾಸನ
ಮನಗಳ ಕತ್ತಲು !

ಅಲೆದುಬ್ಬರದ
ಅಬ್ಬರಕ್ಕೆ ಶರಣಾಗಲೆ ?
ಗಾಳಿಯು ತೂರಿದ ಕಡೆಗೆ
ನಿನ ನೆನಪು ಬಿಟ್ಟು ಹೊರಡಲೇ ?
ಸಾವಿಗೂ ಅಂಜದೆ
ಎದುರು ಗಾಳಿಗೆ ನಾವೆಯ ನಡೆಸಲೆ ?

ಒಂದೇ ಪ್ರಾಣ
ಒಂದೇ ಜೀವನ
ಒಂದೇ ಮಾನ
ಒಂದೇ ದಾರಿ
ಒಂದೇ ಗುರಿ
ಅದುವೇ ನನ್ನ ಮನ !

ಮುನ್ನಡೆಸುವೆ ಮುರಿದ ಈ
ನಾವೆಯನ್ನು ನಿನ್ನ ನೆನಪಿನ ಬಲದಿಂದ
ಸಾಗುವೆ ದೂರದ ಸಂದ್ಯಾ ತೀರಕೆ
ಅದು ನಿನ್ನ ಆತ್ಮ ಸೇರುವ ಛಲದಿಂದ !

- ಶೂಜ್ಞ


2 comments:

  1. ಉತ್ತಮವಾಗಿದೆ ಸಾರ್... ಬಾಳ ಕಡಲಲ್ಲಿ ಸಂಗಾತಿಯ ಕಳೆದುಕೊಂಡ ಮನದ ಅಳಲು! ಇಷ್ಟವಾಯಿತು...

    ReplyDelete
  2. ಪ್ರದೀಪ್ ಸರ್, ನನ್ನ ಬ್ಲಾಗಿಗೆ ಬಂದು ಮತ್ತು ಮೊಟ್ಟ ಮೊದಲ ಅಭಿಪ್ರಾಯ ತಿಳಿಸಿದ್ದಕ್ಕೆ ನಿಮಗೆ ಅನಂತ ಧನ್ಯವಾದಗಳು... ನಿಮ್ಮ ಸಹಕಾರ ಹೀಗೆ ಮುಂದುವರೆಯಲಿ ಎಂದು ಆಶಿಸುತ್ತೇನೆ ..

    ReplyDelete